ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್‌ ಶೆಟ್ಟಿ..! ಕಾಂತಾರದ ನಟನಿಗೆ ಫುಲ್ ಡಿಮ್ಯಾಂಡ್

ನ್ಯೂಸ್ ನಾಟೌಟ್: ‘ಕಾಂತಾರ ಚಾಪ್ಟರ್‌ 1′ ಸಿನಿಮಾ ಕೆಲಸದ ನಡುವೆಯೇ ಇತ್ತೀಚೆಗೆ ರಿಷಬ್‌ ಶೆಟ್ಟಿ (Rishab Shetty) ತೆಲುಗಿನ ‘ಜೈ ಹನುಮಾನ್‌’ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಇದೀಗ ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ಡಿವೈನ್‌ ಸ್ಟಾರ್‌ ರಿಷಬ್‌ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಗ್ಗೆ ಇದೀಗ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ಡೈರೆಕ್ಟರ್‌ ಸಂದೀಪ್‌ ಸಿಂಗ್‌ ಅವರ ಹಿಸ್ಟೋರಿಕಲ್‌ ಡ್ರಾಮಾ ಸಿನಿಮಾದಲ್ಲಿ ರಿಷಬ್‌ ನಟಿಸಲಿದ್ದಾರೆ. ಸದ್ಯ ಶಿವಾಜಿ ಮಹಾರಾಜ್‌ ಲುಕ್‌ನಲ್ಲಿ ಖಡ್ಗ ಹಿಡಿದು ರಿಷಬ್‌ ಕಾಣಿಸಿಕೊಂಡಿರುವ ಲುಕ್‌ ರಿವೀಲ್‌ ಆಗಿದೆ. ಈ ಪೋಸ್ಟರ್‌ ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. View this post on Instagram A post shared by SANDEEP SINGH (@officialsandipssingh) ಅದಷ್ಟೇ ಅಲ್ಲ, ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್‌ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಕೂಡ ಚಿತ್ರತಂಡ ಘೋಷಣೆ ಮಾಡಿದೆ. Click here to follow us on Facebook