ನ್ಯೂಸ್ ನಾಟೌಟ್ : ಕಳೆದ ಬಿಗ್ ಬಾಸ್ ಸೀಸನ್ – 10 ರಲ್ಲಿ ಫ್ಯಾಷನ್ ಡಿಸೈನರ್ ಪವಿ ಪೂವಪ್ಪ ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದರು. ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ನಗುಮುಖದಲ್ಲೇ ಬ್ರೇಕಪ್ ಆಗಿರುವ ವಿಚಾರ ಹಾಗೂ ಅದರ ಹಿಂದಿನ ಕಾರಣವನ್ನು ರಿವೀಲ್ ಮಾಡಿದ್ದಾರೆ.
5 ವರ್ಷಗಳಿಂದ ಜತೆಯಲ್ಲೇ ಇದ್ದರು. ಎಲ್ಲವೂ ಅರ್ಥ ಮಾಡಿಕೊಂಡು ಚೆನ್ನಾಗಿದ್ದೀವಿ. ಹೋಗುತ್ತಾ ಹೋಗುತ್ತಾ ಅವರಿಗೆ ನನ್ನ ನಾಯಿಯಿಂದ ಪ್ರಾಬ್ಲಂ ಆಯಿತು. ಮದುವೆ ಆದ್ಮೇಲೆ ನಾಯಿಯನ್ನು ಮನೆಯಲ್ಲಿಡಲು ಬಿಡಲ್ಲ ಅಂಥ ಹೇಳಿದ್ರು. ಸಣ್ಣ ಸಣ್ಣ ವಿಚಾರಕ್ಕೆ ಕಾರಣವನ್ನು ಕೊಡೋಕೆ ಶುರು ಮಾಡಿದ್ರು. ಆ ಕಾರಣದಿಂದ ನಾನೇ ಬೇಡ ಅಂಥ ಹಿಂದೇಟು ಹಾಕಿದೆ, ಬ್ರೇಕ್ ಅಪ್ ಮಾಡಿಕೊಂಡೆ ಎಂದಿದ್ದಾರೆ.
ನನ್ನ ಮನೆಯಲ್ಲಿ 7 ನಾಯಿಗಳಿವೆ. ನಮ್ಮದು ಎನ್ ಜಿಒ ಕೂಡ ಇದೆ. ನಾವು ನಾಯಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡುತ್ತೇವೆ. ಚಿಕ್ಕ ಪ್ರಾಯದಿಂದಲೇ ನನಗೆ ನಾಯಿ, ಬೆಕ್ಕುಗಳಂದ್ರೆ ತುಂಬಾ ಪ್ರೀತಿ ಎಂದರು. ಪವಿ, ಡಿಜೆ ಮ್ಯಾಡ್ ಎನ್ನುವವರ ಜತೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.
Click