ನ್ಯೂಸ್ ನಾಟೌಟ್: ಕೆಲವೊಮ್ಮೆ ಜೀವನದಲ್ಲಿ ನಡೆಯಬಾರದ ಘಟನೆ ನಡೆದಾಗ ಆಗಬಾರದ್ದು ಆಗಿಬಿಡುತ್ತದೆ. ಇಂಥ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ.
ತಿಂಗಳ ಹಿಂದೆ ಪತಿ ತೀರಿಕೊಂಡ ಬಳಿಕ ದು:ಖದಿಂದ ಮಾನಸಿಕವಾಗಿ ಕೊರಗಿದ್ದ ಅಂಗನವಾಡಿ ಶಿಕ್ಷಕಿಯೊಬ್ಬರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆಯನ್ನು ಸೌಮ್ಯ (39) ಎಂದು ಗುರುತಿಸಲಾಗಿದೆ. ಮಿಯ್ಯಾರು ಚಚ್ ೯ ಬಳಿಯ ಅಂಗನವಾಡಿಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಇವರ ಪತಿ ಕಳೆದೊಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದೀಗ ತಾಯಿಯೂ ಮೃತಪಟ್ಟು ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.