ನ್ಯೂಸ್ ನಾಟೌಟ್ : ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024-25 ಶೈಕ್ಷಣಿಕ ವರ್ಷದ ಎಂ.ಬಿ.ಬಿ.ಎಸ್ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಣಾ ಸಮಾರಂಭ ಶನಿವಾರ (ನ.16 )ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಅಧ್ಯಕ್ಷ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿ ವಿದ್ಯಾರ್ಥಿಗಳು ಶಿಸ್ತು ಬದ್ಧರಾಗಿರಬೇಕು. ದುಶ್ಚಟಗಳಿಗೆ ಬಲಿಯಾಗದೆ ಓದಿನತ್ತ ಹೆಚ್ಚಿನ ಗಮನ ಕೊಡಬೇಕು. ಸಮರ್ಥ ಹಾಗೂ ಸಹಾನುಭೂತಿಯುಳ್ಳ ವೈದ್ಯರನ್ನು ರೂಪಿಸುವತ್ತ ಎಲ್ಲರ ಸಹಕಾರ ಅಗತ್ಯ. ಸಂಸ್ಥೆಯು ಒದಗಿಸುವ ಪ್ರತಿಯೊಂದು ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಮತ್ತು ವೈದ್ಯಕೀಯ ವೃತ್ತಿಯ ಪ್ರಮುಖ ಮೌಲ್ಯಗಳಾದ ಸಹಾನುಭೂತಿ, ಮತ್ತು ಸೇವೆಗೆ ಬದ್ಧರಾಗಿರಬೇಕು ಎಂದರು.
ಮುಖ್ಯ ಅತಿಥಿ ಮಂಗಳೂರು, ದೇರಳಕಟ್ಟೆ ಯೇನೆಪೋಯ ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ| ಗಂಗಾಧರ ಸೋಮಯಾಜಿ ಮಾತನಾಡಿ, ಕೆವಿಜಿ ಸಂಸ್ಥೆ ಸಮರ್ಥ ನಾಯಕತ್ವದ ಅತ್ಯುತ್ತಮ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಹೆತ್ತವರ ಕಠಿಣ ಪರಿಶ್ರಮವನ್ನು ಮೊದಲು ನೆನಪಿನಲ್ಲಿಟ್ಟುಕೊಂಡು, ಉತ್ತಮ ಸಾಧನೆಗಳನ್ನು ಮಾಡಬೇಕು ಎಂದರು. ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಂ.ಬಿ.ಬಿ.ಎಸ್ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಿಸಿ ಶುಭಾಶಯ ಕೋರಿದರು. ಅನಾಟಮಿ ವಿಭಾಗ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ ವಿದ್ಯಾಶಾಂಭವ ಪಾರೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಗಣ್ಯರು ಕೆವಿಜಿ ಹ್ಯಾಂಡ್ ಬುಕ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಯೋಕೆಮಿಸ್ಟ್ರಿ ವಿಭಾಗದ ಸಹಪ್ರಾಧ್ಯಾಪಕಿ ಡಾ| ಶ್ರುತಿ ಅವರು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕ್ಯಾಂಪಸ್ ಕುರಿತು ವಿವರವಾದ ಮಾಹಿತಿ ನೀಡಿದರು. ರಾಗಿಂಗ್ ಹಾಗೂ ಆ್ಯಂಟಿ ರಾಗಿಂಗ್ ಕುರಿತಾದ ಮಾಹಿತಿಯನ್ನು ಡಾ| ಗೀತಾ ದೊಪ್ಪ ವಿವರಿಸಿದರು.
ಮೆಡಿಕಲ್ ಸೂಪರಿಂಟೆಂಡೆಂಟ್ ಡಾ|ಸಿ. ರಾಮಚಂದ್ರ ಭಟ್, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥರು ಹಾಗೂ ಪ್ರೊಫೆಸರ್ ಡಾ| ಶಿವರಾಜ್ ಶಂಕರ್, ಇ.ಎನ್.ಟಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರೊಫೆಸರ್ ಹಾಗೂ ಮುಖ್ಯ ವಿದ್ಯಾರ್ಥಿ ಸಲಹೆಗಾರ ಡಾ| ರವಿಶಂಕರ್, ಫಿಸಿಯಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ| ದಾಮೋದರ್, ಅನಾಟಮಿ ವಿಭಾಗದ ಪ್ರಾಧ್ಯಾಪಕರಾದ ಡಾ| ಸಚಿನ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ತೃತೀಯ ವರ್ಷದ ಎಮ್.ಬಿ.ಬಿಎಸ್ ವಿದ್ಯಾರ್ಥಿ ನಿಕ್ಷೇಪ್ ಪ್ರಾರ್ಥಿಸಿ ಡಾ| ರವಿಶಂಕರ್ ಸ್ವಾಗತಿಸಿದರು. ಡಾ| ಶಿವರಾಜ್ ಶಂಕರ್ ವಂದಿಸಿದರು. ಫಿಸಿಯಾಲಜಿ ವಿಭಾಗದ ಡಾ| ರಕ್ಷತಾ ರಮೇಶ್ ಹಾಗೂ ಡಾ| ಸಂಗೀತಾ ಸೋಮಕುಮಾರ್ ನಿರೂಪಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.