- +91 73497 60202
- [email protected]
- December 3, 2024 10:20 PM
ನ್ಯೂಸ್ ನಾಟೌಟ್: ಬೆಂಗಳೂರು ಸುರಕ್ಷಿತವಾಗಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದು, ದೌರ್ಜನ್ಯದ ವಿಡಿಯೋ ಲೈವ್ ನಲ್ಲಿ ಸೆರೆಯಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನ ರಸ್ತೆಯಲ್ಲಿ ವ್ಲಾಗ್ ಮಾಡುತ್ತಾ ಹೋಗುತ್ತಿರುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋಗಿರುವ ಘಟನೆ ನಿನ್ನೆ(ನ.7) ರಂದು ನಡೆದಿದೆ. ನೇಹಾ ಬಿಸ್ವಾಲ್ ಕೆಲಸದಿಂದ ಹಿಂದಿರುಗುತ್ತಿದ್ದಾಗ ವೀಡಿಯೊ ಬ್ಲಾಗ್ ಮಾಡಿಕೊಂಡು ಬಂದಿದ್ದಾರೆ. ಎದುರಿನಿಂದ ದಿಕ್ಕಿನಿಂದ ಸೈಕಲ್ ನಲ್ಲಿ ಬಂದ 10 ವರ್ಷದ ಬಾಲಕ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋಗಿದ್ದಾನೆ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂಥಾ ಘಟನೆ ನನ್ನ ಜೀವನದಲ್ಲಿ ಎಂದೂ ನಡೆದಿರಲಿಲ್ಲ ಎಂದು ಆಕೆ ಕಣ್ಣೀರು ಹಾಕಿದ್ದಾರೆ. ನಾನು ನಡೆಯುವಾಗ ವಿಡಿಯೋ ಮಾಡುತ್ತಾ ಹೋಗುತ್ತಿದ್ದೆ, ಆ ಹುಡುಗ ಆರಂಭದಲ್ಲಿ ನಾನು ಹೋಗುತ್ತಿದ್ದ ದಿಕ್ಕಿನಲ್ಲೇ ಹೋಗುತ್ತಿದ್ದ, ನಂತರ ಮುಂದೆ ಹೋದವನು ನನ್ನ ನೋಡಿ ಯೂ-ಟರ್ನ್ ತೆಗೆದುಕೊಂಡು ಬಂದು ನಾನು ಹೇಗೆ ಮಾತನಾಡುತ್ತಿದ್ದೆ ಅದೇ ರೀತಿ ಮಾತನಾಡಿ ಗೇಲಿ ಮಾಡಿದ್ದಾನೆ, ಬಳಿಕ ಎದೆಯನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ವಿವರಿಸಿದ್ದಾರೆ. ಕಿರುಕುಳ ನೀಡಿ ಓಡಿ ಹೋಗಲು ಪ್ರಯತ್ನಿಸಿದ್ದ ಕೂಡಲೇ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಆತ ಇನ್ನೂ ಚಿಕ್ಕವನು ಇದೊಂದು ಬಾರಿ ಕ್ಷಮಿಸುವಂತೆ ಜನರು ಕೇಳಿಕೊಂಡಿದ್ದಾರೆ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸಿಕ್ಕಿಬಿದ್ದ ಬಳಿಕ ಆತ ನಾನು ಸೈಕಲ್ ನಲ್ಲಿ ಸಮತೋಲನ ಕಳೆದುಕೊಂಡು ಬೀಳುಬಂತಾದೆ ಆಗ ಆಕೆಯನ್ನು ಆಕಸ್ಮಿಕವಾಗಿ ತಳ್ಳಿದ್ದೇನೆ ಎಂದು ಬಾಲಕ ಹೇಳಿದ್ದಾನೆ ಎನ್ನಲಾಗಿದೆ. ಆತ ಇನ್ನೂ ಚಿಕ್ಕವನಾಗಿರುವ ಕಾರಣ ನಾನು ಯಾವುದೇ ಎಫ್.ಐ.ಆರ್ ದಾಖಲಿಸಿಲ್ಲ, ಆತನ ಭವಿಷ್ಯವನ್ನು ಹಾಳು ಮಾಡುಲು ನನಗೆ ಮನಸ್ಸಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ