ನ್ಯೂಸ್ ನಾಟೌಟ್: ಮದುವೆ ಅಂದ್ರೆ ಒಂದು ಸಂಭ್ರಮ. ವಧು ಮತ್ತು ವರ ಖುಷಿಯ ಜೊತೆಗೆ ಮದುವೆ ಕಾರ್ಯ ಸುಸೂತ್ರವಾಗಿ ನಡೆದ್ರೆ ಸಾಕಪ್ಪಾ ಎಂದು ಸ್ವಲ್ಪ ಟೆನ್ಷನ್ ನಲ್ಲಿ ಇರ್ತಾರೆ. ಆದ್ರೆ ಇಲ್ಲೊಬ್ಬ ವರ ವಿವಾಹ ಶಾಸ್ತ್ರ ಎಲ್ಲಾ ಆಮೇಲೆ ಮಾಡಿದ್ರಾಯ್ತು ನನ್ಗಂತೂ ತಾಳಿ ಕಟ್ಟೋದಕ್ಕಿಂತ ಆಟನೇ ಮುಖ್ಯ ಎಂಬಂತೆ ಮದುವೆ ಮಂಟಪದಲ್ಲಿ ವಿವಾಹ ಶಾಸ್ತ್ರದ ನಡೆಸಲು ಕುಳಿತವ ಫ್ರೆಂಡ್ಸ್ ಜೊತೆ ಮೊಬೈಲ್ ನಲ್ಲಿ ಲೂಡೋ ಗೇಮ್ ಆಡಿದ್ದಾನೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಮದುವೆ ಮಂಟಪದಲ್ಲಿ ವಿವಾಹ ಶಾಸ್ತ್ರಗಳು ನಡೆಯುತ್ತಿರುವ ಮಧ್ಯದಲ್ಲಿಯೇ ವರ ತನ್ನ ಇಬ್ಬರು ಫ್ರೆಂಡ್ಸ್ ಜೊತೆ ಕುಳಿತು ಮೊಬೈಲ್ ನಲ್ಲಿ ಲೂಡೋ ಗೇಮ್ ಆಡುತ್ತಿರುವ ದೃಶ್ಯ ಕಂಡುಬಂದಿದೆ.
ನವೆಂಬರ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2.6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.
Click