ನ್ಯೂಸ್ ನಾಟೌಟ್ : ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಮೂರು ವರ್ಷದ ಗಂಡು ಹುಲಿಯನ್ನು ಕೊಂದ ಕಾರಣಕ್ಕೆ ಗುರುವಾರ(ನ.28) ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕಂದನ್, ಮಾರಿಮುತ್ತು ಮತ್ತು ವೇದನ್ ಎಂಬ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಗೂಡಲೂರಿನಲ್ಲಿ ಇತ್ತೀಚೆಗೆ ಮೂರು ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳನ್ನು ಹಿಡಿಯುಲ್ಲಿ ನಿಸ್ಸೀಮರಾಗಿದ್ದ ಈ ಮೂವರನ್ನು ಶಂಕಿಸಿ ವಿಚಾರಣೆ ನಡೆಸಿದಾಗ ಹುಲಿ ಮರಿಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರು ಎಂದಿನಂತೆ ಗೂಡಲೂರಿನ ಆರಣ್ಯ ಪ್ರದೇಶದಲ್ಲಿ ಕಾಡು ಹಂದಿ ಹಿಡಿಯಲು ಬಲೆ ಬೀಸಿದ್ದಾರೆ. ಅರಣ್ಯದ ವಿವಿಧ ಪ್ರದೇಶಗಳಲ್ಲಿ ಕ್ಲಚ್ ತಂತಿಗಳಿಂದ ತಯಾರಿಸಿದ ಬಲೆಯ ಬೋನ್ ಗಳನ್ನು ಇಟ್ಟಿದ್ದಾರೆ. ಈ ಬೋನ್ಗಳನ್ನು ಸಾಮಾನ್ಯವಾಗಿ ಹಂದಿಗಳನ್ನು ಹಿಡಿಯಲು ಬಳಸುತ್ತಾರೆ. ಆದರೆ, ಅಂದು ಹಂದಿಗಳ ಬದಲಾಗಿ ಮೂರು ವರ್ಷದ ಹುಲಿ ಮರಿ ಬೋನ್ ಗೆ ಬಿದ್ದಿತ್ತು. ತಂತಿ ಬಲೆ ಹುಲಿಯ ಕುತ್ತಿಯಲ್ಲಿ ಬಿಗಿಹಿಡಿತ ಕಾರಣ ಸ್ಥಳದಲ್ಲೇ ಮೃತಪಟ್ಟಿದೆ.ಇದರಿಂದ ಭಯಕೊಂಡ ಈ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅರಣ್ಯಧಿಕಾರಿ ಗಸ್ತು ಸಂದರ್ಭದಲ್ಲಿ ಪ್ರಕರಣದ ಬೆಳಕಿಗೆ ಬಂದಿದೆ.
”ಮೀಸಲು ಆರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹುಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇನ್ನು ಮುಂದೆ ಮೀಸಲು ಅರಣ್ಯದಲ್ಲಿ ಗಸ್ತು ಹೆಚ್ಚಿಸಲಾಗುತ್ತದೆ” ಎಂದು ಅರಣ್ಯಧಿಕಾರಿಯೊಬ್ಬರು ತಿಳಿಸಿದ್ದಾರೆ.
Click