ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಏನೇ ಪುಟ್ಟ ವಸ್ತುಗಳನ್ನು ಖರೀದಿ ಮಾಡಿದ್ರೂ, ಅವುಗಳನ್ನು ಬಾಕ್ಸ್ ನಲ್ಲಿ ಚೆನ್ನಾಗಿ ಪ್ಯಾಕಿಂಗ್ ಮಾಡಿ ಡೆಲಿವರಿ ಮಾಡ್ತಾರೆ. ಈ ಆರ್ಡರ್ ಕೂಡಾ ಚೆನ್ನಾಗಿ ಪ್ಯಾಕ್ ಮಾಡಿ ಕಳಿಸ್ತಾರೆ ಅನ್ನೋ ಧೈರ್ಯದಲ್ಲಿ ಇಲ್ಲೊಬ್ಬ ವ್ಯಕ್ತಿ ಆಫೀಸಿಗೆ ಕಾಂಡೋಮ್ ಆರ್ಡರ್ ಮಾಡಿ ಮುಜುಗರಕ್ಕೀಡಾಗಿದ್ದಾರೆ.
ಹೌದು ಕಾಂಡೋಮ್ ಯಾರಿಗೂ ಕಾಣಿಸದಂತೆ ಬಾಕ್ಸ್ ಒಳಗೆ ಪ್ಯಾಕಿಂಗ್ ಮಾಡಿ ಡೆಲಿವರಿ ಮಾಡುತ್ತಾರೆ ಅನ್ನೋ ಧೈರ್ಯದಿಂದ ಆ ವ್ಯಕ್ತಿ ಸ್ವಿಗ್ಗಿ ಇನ್ ಸ್ಟಾಮಾರ್ಟ್ನಿಂದ ಡೈರೆಕ್ಟ್ ಆಫೀಸಿಗೆ ಕಾಂಡೊಮ್ ಆರ್ಡರ್ ಮಾಡಿದ್ದಾರೆ. ಆದ್ರೆ ಅದರ ಪ್ಯಾಕಿಂಗ್ ನೋಡಿದ ಮೇಲೆ ತಾನು ಯಾಕಾದ್ರೂ ಈ ಆರ್ಡರ್ ಮಾಡಿದ್ನಪ್ಪಾ ಎಂದು ಮುಜುಗರಪಟ್ಟಿದ್ದಾರೆ.
ಪ್ರತಿ ಬಾರಿ ಬ್ಲಿಂಕಿಟ್ ನಿಂದ ಕಾಂಡೋಮ್ಗಳನ್ನು ಆರ್ಡರ್ ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿ ಎಲ್ಲಾ ಡೆಲಿವರಿ ಕಂಪೆನಿಗಳು ಕೂಡಾ ಆರ್ಡರ್ ಗಳನ್ನು ಚೆನ್ನಾಗಿ ಪ್ಯಾಕಿಂಗ್ ಮಾಡಿ ಕಳುಹಿಸುತ್ತಾರೆ ಅನ್ನೋ ಭರವಸೆಯಿಂದ ಕೆಲಸದ ಸಮಯದಲ್ಲಿಯೇ ಸ್ವಿಗ್ಗಿ ಇನ್ ಸ್ಟಾಮಾರ್ಟ್ನಿಂದ ಕಾಂಡೋಮ್ ಗಳನ್ನು ಆರ್ಡರ್ ಮಾಡಿದ್ದಾರೆ. ಮತ್ತು ತನ್ನ ಆರ್ಡರ್ ಅನ್ನು ಕಂಪನಿಯ ರಿಸೆಪ್ಷನ್ ಡೆಸ್ಕ್ ನಲ್ಲಿ ಇಡುವಂತೆ ಡೆಲಿವರಿ ಬಾಯ್ ಗೆ ಹೇಳಿದ್ದಾರೆ. ಕೆಲಸ ಮುಗಿಸಿ ತನ್ನ ಆರ್ಡರ್ ಅನ್ನು ಕಲೆಕ್ಟ್ ಮಾಡಲು ರಿಸೆಪ್ಷನ್ ಡೆಸ್ಕ್ ಬಳಿ ಹೋದಾಗ ಗುಲಾಬಿ ಬಣ್ಣದ ಲಕೋಟೆಯಲ್ಲಿ ಕಾಂಡೋಮ್ ಪ್ಯಾಕ್ ಮಾಡಿರುವುದನ್ನು ಕಂಡು ಆ ವ್ಯಕ್ತಿ ಶಾಕ್ ಆಗಿದ್ದು, ಆಫೀಸ್ ನಲ್ಲಿ ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನು ಎಂದು ಮುಜುಗರಕ್ಕೀಡಾಗಿದ್ದಾರೆ. ಮತ್ತು ಆಫೀಸ್ ನಲ್ಲೆಲ್ಲಾ ಸುದ್ದಿ ಹರಡಿಯಾಗಿತ್ತು.
Click