ನ್ಯೂಸ್ ನಾಟೌಟ್: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಕರಸೇವೆಯಲ್ಲಿ ಹುತಾತ್ಮರಾದವರನ್ನು ರಕ್ತದಾನ ಶಿಬಿರ ಆಯೋಜಿಸುವುದರ ಮೂಲಕ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ವಿಶೇಷವಾಗಿ ಸ್ಮರಿಸಿತು.
ಕೆವಿಜಿ ಆಸ್ಪತ್ರೆಯ ರಕ್ತ ನಿಧಿಯಲ್ಲಿ ಅ.4ರಂದು ಕಾರ್ಯಕ್ರಮ ನೆರವೇರಿತು. ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥೆ ಡಾ| ಸತ್ಯವತಿ ಆಳ್ವಾ, ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ|ನವ್ಯ, ಡಾ|ಅಂಜಲಿ, ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಪ್ರಖಂಡ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಜಿಲ್ಲಾ ಸಾಪ್ತಾಯಿಕ್ ಮಿಲನ್ ರೂಪೇಶ್ ಪೂಜಾರಿಮನೆ, ಪ್ರಖಂಡ ಸಹ ಕಾರ್ಯದರ್ಶಿ ಬಾನುಪ್ರಕಾಶ್,ಪ್ರಖಂಡ ಸಹ ಸಂಯೋಜಕ್ ಸನತ್ ಚೊಕ್ಕಾಡಿ, ಪ್ರಕಾಶ್ ಯಾದವ್, ನಗರ ಅಧ್ಯಕ್ಷರು ಉಪೇಂದ್ರ, ನಗರ ಸಂಯೋಜಕ್ ವರ್ಷಿತ್ ಚೊಕ್ಕಾಡಿ ಹಾಗೂ ರಕ್ತದಾನಿಗಳು ರಕ್ತ ನಿಧಿ ಸಿಬ್ಬಂದಿ, ಕಾರ್ಯಕರ್ತರು ಹಾಜರಿದ್ದರು.