ನ್ಯೂಸ್ ನಾಟೌಟ್: ವೇದ ಪಾಠ ಅಧ್ಯಯನದಿಂದ ನಮ್ಮ ಭಾರತೀಯ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಉಳಿವಿಗೆವೇದ ಪಾಠ ಅಧ್ಯಯನ ಪೂರಕ. ಪ್ರತಿ ಗ್ರಾಮಗಳಲ್ಲಿ ವೇದ ವಿದ್ವಾಂಸರು ಇದ್ದು ಇದರ ಮಾರ್ಗದರ್ಶನ ನೀಡುತ್ತಿರಬೇಕು. ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಶಿಕ್ಷಣ ನೀಡುವ ಲೌಖಿಕ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿ, ಸಂಸ್ಕಾರ ಕಲಿಸುವ ಧಾರ್ಮಿಕ ಶಿಕ್ಷಣವನ್ನು ಕಲಿಸುವ ವೇದ ಪಾಠಶಾಲೆ ಗಳನ್ನು ದೇವಸ್ಥಾನಗಳಲ್ಲಿ ಆರಂಭಿಸುವಂತಾಗಲಿ ಎಂದು ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ಕಂಚಿ ಪೀಠದಲ್ಲಿ ತಲ ತಲಾಂತರಗಳಿಂದ ವೇದ ಅಧ್ಯಯನ ನಡೆಯುತ್ತಿದೆ ಎಂದು ಮಾತನಾಡಿದ ಅವರು, ‘ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ 20 ವರ್ಷಗಳ ಹಿಂದೆ ಆಗಮಿಸಿದ್ದನ್ನು ಸ್ಮರಿಸಿದರು. ಮಾತ್ರವಲ್ಲ ಸುಳ್ಯಕ್ಕೂ ಕಾಂಚಿ ಕಾಮಕೋಟಿ ಪೀಠಕ್ಕೂ ಅವಿನಾಭಾವ ಸಂಬಂಧವಿದೆ. ಕಂಚಿ ಪೀಠದಲ್ಲಿ ವೇದಾಧ್ಯಯನ ನಡೆಸಿ ವೇದ ವಿದ್ವಾಂಸರಾದವರು ಹಲವು ಮಂದಿ ಇದ್ದಾರೆ. ಇಲ್ಲಿನ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ಮೂಲಕ ಹಲವರು ವೇದಾಧ್ಯಯನ ನಡೆಸುತ್ತಿದ್ದಾರೆ ಎಂದರು. ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಪೀಠದ ವತಿಯಿಂದ ಶಾಲು ಹೊದಿಸಿ ಪ್ರಸಾದ ಸ್ಮರಣಿಕೆ ನೀಡಿ ಗೌರವಿಸಲಾಯಿತು.