ನ್ಯೂಸ್ ನಾಟೌಟ್: ಶಿಕ್ಷಕರೊಬ್ಬರು ಶಾಲೆಯಲ್ಲೇ ವಿದ್ಯಾರ್ಥಿಯಿಂದ ತನ್ನ ಪಾದಕ್ಕೆ ಮಸಾಜ್ ಮಾಡಿಸಿಕೊಂಡಿರುವ ಆರೋಪದ ಮೇಲೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಅಮಾನತ್ತುಗೊಂಡ ಘಟನೆ ತಮಿಳುನಾಡಿನ ಪೂರ್ವ ರಾಜಪಾಳ್ಯಂನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಸೇಲಂನ ತಲೈವಾಸಲ್ ನ ಕಾಮಕ್ಕಪಾಳ್ಯಂನ ಜೆ ಜಯಪ್ರಕಾಶ್ ಅಮಾನತ್ತುಗೊಂಡಿರುವ ಶಿಕ್ಷಕ ಎಂದು ಗುರುತಿಸಲಾಗಿದೆ.
ಜಯಪ್ರಕಾಶ್ ಎಂಬವರು ಸುಮಾರು 17 ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ತಡವಾಗಿ ಘಟನೆ ಬೆಳಕಿಗೆ ಬಂದಿದ್ದು, ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಗಣಿತ ಶಿಕ್ಷಕ ಮಂಜುನಾಥ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಿಕ್ಷಕನ ವಿಶ್ರಾಂತಿ..! ವಿಡಿಯೋ ವೈರಲ್, ಶಿಕ್ಷಕ ಅಮಾನತ್ತು..! https://t.co/i6lEwTbcj5
— News Not Out (@News_Not_Out) November 24, 2024
ಪದೇ ಪದೇ ಶಾಲೆಗೆ ಗೈರಾಗುತ್ತಿದ್ದರು ಎಂದು ಶಾಲೆಯ ಇತರ ಶಿಕ್ಷಕರು ಹೇಳಿದ್ದಾರೆ. ಅಲ್ಲದೆ ಶಾಲೆಗೆ ಬಂದರೂ ಪಾಠ ಮಾಡದೇ ಕಚೇರಿಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಕರೆಸಿ ಕಾಲು ಒತ್ತುವಂತೆ (ಮಸಾಜ್) ಹೇಳುತ್ತಿದ್ದರು. ಅದೇ ರೀತಿ ಶುಕ್ರವಾರ(ನ.22) ವಿದ್ಯಾರ್ಥಿಯಿಂದ ತನ್ನ ಪಾದ ಒತ್ತುವಂತೆ ಹೇಳಿದ್ದಾರೆ. ಈ ವೇಳೆ ಅದೇ ಶಾಲೆಯ ಶಿಕ್ಷಕರೊಬ್ಬರು ತನ್ನ ಮೊಬೈಲ್ ನಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಗಣಿತ ಶಿಕ್ಷಕ ಅಮಾನತ್ತುಗೊಂಡಿದ್ದಾರೆ.
Click