ಹೋಮ್‌ ವರ್ಕ್‌ ಮಾಡದ್ದಕ್ಕೆ ಬೆತ್ತದಿಂದ ಥಳಿಸಿದ ಶಿಕ್ಷಕ..! ಕಣ್ಣಿಗೆ ತಾಗಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ..!

ನ್ಯೂಸ್‌ ನಾಟೌಟ್‌: ಹೋಮ್‌ ವರ್ಕ್‌ ಮಾಡದ ಕಾರಣಕ್ಕೆ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ಕಾರಣ ವಿದ್ಯಾರ್ಥಿ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಘಟನೆ ಬಿಹಾರದ ಅರ್ವಾಲ್ ಜಿಲ್ಲೆಯ ಉಮೈರಾಬಾದ್ ಪ್ರದೇಶದ ಹಿಮಾಲಯನ್ ವಸತಿ ಶಾಲೆಯಲ್ಲಿ ನಡೆದಿದೆ. 5ನೇ ತರಗತಿಯಲ್ಲಿ ಓದುತ್ತಿರುವ ಅಮೃತ್ ರಾಜ್ ಅನಾರೋಗ್ಯವಾದ ಕಾರಣ ಶಾಲೆಗೆ ರಜೆ ಹಾಕಿದ್ದರು ಎನ್ನಲಾಗಿದೆ. ಇದರಿಂದಾಗಿ ಹಿಂದಿನ ದಿನ ಕೊಟ್ಟ ಹೋಮ್‌ ವರ್ಕ್‌ ಮಾಡಲು ಸಾಧ್ಯವಾಗಿರಲಿಲ್ಲ. ಗುಣಮುಖವಾಗಿ ಶಾಲೆಗೆ ಬಂದಾಗ ಸಹಾಯಕ ಶಿಕ್ಷಕನಾಗಿ ಹುದ್ದೆಯಲ್ಲಿದ್ದ ಪ್ರಿನ್ಸ್ ಕುಮಾರ್ ಎಂಬವರು ಅಮೃತ್‌ ಬಳಿ ಹೋಮ್‌ ವರ್ಕ್‌ ಮಾಡಿ ಯಾಕೆ ಬಂದಿಲ್ಲವೆಂದು ಕೇಳಿದ್ದಾರೆ. ಇದಕ್ಕೆ ಅಮೃತ್‌ ಅನಾರೋಗ್ಯವಾಗಿದ್ದ ಕಾರಣವನ್ನು ಹೇಳಿದ್ದಾರೆ. ಆದರೆ ಶಿಕ್ಷಕ ಪ್ರಿನ್ಸ್‌ ಕುಮಾರ್‌ ವಿದ್ಯಾರ್ಥಿಯ ಮಾತನ್ನು ಕೇಳದೆ ಬೆತ್ತದಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಹಿಗ್ಗಾಮುಗ್ಗಾ ಥಳಿಸಿದ ಕಾರಣಕ್ಕೆ ಅಮೃತ್‌ ಅವರ ಕಣ್ಣಿಗೆ ಬೆತ್ತದ ಪೆಟ್ಟು ಬಿದ್ದಿದೆ.ಕೂಡಲೇ ಅಮೃತ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಐಜಿಎಂಎಸ್ ಪಾಟ್ನಾದ ಕಣ್ಣಿನ ವಿಭಾಗಕ್ಕೆ ಕರೆದುಕೊಂಡು ಹೋಗಲಾಗಿದೆ. ಆಳವಾದ ಗಾಯದಿಂದಾಗಿ ಅಮೃತ್ ಕಡಿಮೆ ದೃಷ್ಟಿ ಮತ್ತು ರೆಟಿನಾದ ಹಾನಿಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ. Click