SSLCಯಲ್ಲಿ ಫೇಲ್ ಆಗಿದ್ದಕ್ಕೆ ದೇವಿಯ ವಿಗ್ರಹ ವಿರೂಪಗೊಳಿಸಿದ ಬಾಲಕ..! ರಾತ್ರೋರಾತ್ರಿ ಒಬ್ಬನೆ ಓಡಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆ

ನ್ಯೂಸ್ ನಾಟೌಟ್: ಎಸ್.​ಎಸ್.​ಎಲ್.​ಸಿ ಯಲ್ಲಿ ಮೂರು ಬಾರಿ ಫೇಲ್ ಆಗಿದ್ದಕ್ಕೆ ಬಾಲಕ ಬೆಂಗಳೂರಿನ ತಿಪ್ಪಸಂದ್ರದ ಸರ್ಕಲ್ ​ನಲ್ಲಿದ್ದ ಲಕ್ಷ್ಮೀ ಭುವನೇಶ್ವರಿ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಬಾಲಕ ಗುರುವಾರ ರಾತ್ರಿ ವಿಗ್ರಹ ವಿರೂಪಗೊಳಿಸಿ ಹೋಗಿದ್ದಾನೆ. ಮರುದಿನ ದೇವಸ್ಥಾನಕ್ಕೆ ಬಂದ ಭಕ್ತರು ವಿಗ್ರಹ ವಿರೂಪಗೊಂಡಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೀವನ್ ಭೀಮಾನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ನಿನ್ನೆ(ನ.16) ಬಾಲಕ ಕೃತ್ಯ ಬೆಳಕಿಗೆ ಬಂದಿದೆ. ತಿಪ್ಪಸಂದ್ರದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕ ದೈವ ಭಕ್ತನಾಗಿದ್ದನು. ಭುವನೇಶ್ವರಿ ದೇವಿಯನ್ನು ನಿತ್ಯವೂ ದೇವಿಯನ್ನು ಪೂಜಿಸುತ್ತಿದ್ದನಂತೆ. ಆದರೆ, ಎಸ್​ಎಸ್​ಎಲ್‌ಸಿಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ವಿಗ್ರಹ ವಿರೂಪಗೊಳಿಸಿದ್ದಾನೆ. ಬಾಲಕ ವಿಗ್ರಹ ವಿರೂಪಗೊಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಬಾಲಕ ಮಧ್ಯರಾತ್ರಿ ಒಬ್ಬನೇ ಓಡಾಡುವುದು, ಒಬ್ಬೊಬ್ಬನೇ ಮಾತಾಡೋದು ಮಾಡುತ್ತಿದ್ದನು ಎನ್ನಲಾಗಿದೆ. ಜೀವನ್ ಭೀಮಾನಗರ ಪೊಲೀಸರು ಸದ್ಯ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.