ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ “ಶ್ರೀರಕ್ಷಾ” ಸಂಜೀವಿನಿ ಒಕ್ಕೂಟ ಅಜ್ಜಾವರ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಸರಣಿ ಕಾರ್ಯಕ್ರಮವನ್ನು ಶನಿವಾರ (ನ.9) ಮೇನಾಲದ ಡಾ| ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ NRLM ತಾಲೂಕು ಪಂಚಾಯತ್ ನ ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಮೇನಾಲ, ಮೇನಾಲ ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ, ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಎನ್ ಉಪಸ್ಥಿತರಿದ್ದರು.
ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಲರ್ಸ್ ಗಾರ್ಮೆಂಟ್ಸ್ ನ್ಯೂ ಡಿಸೈನರ್ ಲೇಡಿಸ್ ಟೈಲರಿಂಗ್ ಮತ್ತು ಹೊಲಿಗೆ ತರಬೇತಿ ಕೇಂದ್ರದ ಮಾಲಕಿ ರಾಜೇಶ್ವರಿ ಶುಭಕರ ಅವರು ಸಾರಿಗೆ ಕುಚ್ಚು, ಮ್ಯಾಟ್ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 43 ಸದಸ್ಯರು ಭಾಗವಹಿಸಿ ತರಬೇತಿಯನ್ನು ಸದುಪಯೋಗಪಡಿಸಿಕೊಂಡರು. ಕಾರ್ಯಕ್ರಮದಲ್ಲಿ ದಕ್ಷಯ್ ಡಿ.ಎಸ್ ಪ್ರಾರ್ಥಿಸಿ ಚರಿತಾ ಎ.ವಿ ಸ್ವಾಗತಿಸಿದರು. ಪುನೀತ್ ರಾಜ್ ಹೆಚ್. ಕೆ. ವಂದಿಸಿದರು. ಹಾಗೂ ಡಿಂಪಲ್ ಎನ್.ಡಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಘಟಕ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪುನೀತ್ ರಾಜ್ ಹೆಚ್ ಕೆ, ಡಿಂಪಲ್ ಎನ್.ಡಿ ಚರಿತಾ ಎ.ವಿ . ದಕ್ಷಯ್ ಡಿ .ಎಸ್, ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.