ಸಂಸತ್‌ ನಲ್ಲಿ ಇಂದು(ನ.28) ಅಮ್ಮ-ಅಣ್ಣ-ತಂಗಿ ಪ್ರಮಾಣ ವಚನ ಸ್ವೀಕಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಲೋಕಸಭೆಯ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಸಂಸತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್‌ ಗಾಂಧಿ ಅವರ ರಾಜೀನಾಮೆ ಬಳಿಕ ತೆರವಾದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದ್ದರು. 6.22 ಲಕ್ಷ ಮತಗಳನ್ನು ಪಡೆಯುವ ಮೂಲಕ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಂಸತ್‌ ಚಳಿಕಾಲದ ಅಧಿವೇಶನವು ಇದೇ ನವೆಂಬರ್‌ 25ರಿಂದ ಆರಂಭವಾಯಿತು. ಆರಂಭದಲ್ಲೇ ಮಣಿಪುರ ಮತ್ತು ಸಂಭಾಲ್‌ ಹಿಂಸಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು, ಇದರಿಂದ ಕಲಾಪ ಮುಂದೂಡಲಾಯಿತು, 75ನೇ ಸಂವಿಧಾನ ದಿನಾಚರಣೆ ಅಂಗವಾಗಿ 2ನೇ ದಿನವೂ ಯಾವುದೇ ಸಭೆ ನಡೆಯಲಿಲ್ಲ. 3ನೇ ದಿನ ಎರಡೂ ಸದನಗಳನ್ನು ಒಂದು ಗಂಟೆ ಮುಂದೂಡಲಾಯಿತು. ನಾಲ್ಕನೇ ದಿನವಾದ ಇಂದು ಅಧಿವೇಶನದಲ್ಲಿ ಬಿಜೆಪಿ ಹಲವು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ.