ಮದುವೆ ಸಂಭ್ರಮದ ನಡುವೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ..! 7 ಜನರ ಮೇಲೆ ಕಾರು ಹತ್ತಿಸಿ ಆತ ಪರಾರಿ, ಓರ್ವ ಸಾವು..!

ನ್ಯೂಸ್‌ ನಾಟೌಟ್‌: ಮದುವೆ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಜಗಳ ಉಂಟಾಗಿ ಅನಾಹುತ ನಡೆದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ.ವರನ ಕಡೆಯ ಮದುವೆ ದಿಬ್ಬಣ ವಧುವಿನ ಗ್ರಾಮಕ್ಕೆ ಬಂದಿದೆ. ಈ ವೇಳೆ ವಧುವಿನ ಕಡೆಯವರು ಮದುವೆ ನಡೆಯುತ್ತಿರುವ ಸ್ಥಳದಲ್ಲಿ ಸಂಭ್ರಮದಿಂದ ಪಟಾಕಿ ಸಿಡಿಸಿದ್ದಾರೆ. ವರನ ಕಡೆಯ ವ್ಯಕ್ತಿಯೊಬ್ಬ ತನ್ನ ಕಾರು ಪಾರ್ಕ್‌ ಮಾಡುವ ಜಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ವಧುವಿನ ಕಡೆಯವರ ಬಳಿ ವಾಗ್ವಾದಕ್ಕೆ ಇಳಿದಿದ್ದಾನೆ. ಮೊದಲಿಗೆ ಮಾತಿನಿಂದ ಆರಂಭವಾದ ಜಗಳ ಆ ಬಳಿಕ ದೈಹಿಕವಾಗಿ ಹಲ್ಲೆಯವರೆಗೂ ಹೋಗಿದೆ. ಪರಿಣಾಮ ವರನ ಕಡೆಯ ವ್ಯಕ್ತಿ ಸಿಟ್ಟಿನಲ್ಲಿ ಕಾರಿಗೆ ಹತ್ತಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಗಳ ಮೇಲೆ ಕಾರು ಹರಿಸಿದ್ದಾನೆ. ಘಟನೆಯಲ್ಲಿ 7 ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. Click