ನ್ಯೂಸ್ ನಾಟೌಟ್ : ಚೀನಾ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತದೆ ಮತ್ತು ರೋಗಗಳಿಗೂ ಕಾರಣವಾಗಿದೆ. ಚೀನಾದ ಮಾರುಕಟ್ಟೆಗೆ ಕಪ್ಪೆಯ ವಿಶೇಷ ಪಿಜ್ಜಾ ಬಂದಿದೆ. “ಪಿಜ್ಜಾ ಹಟ್” ಸಂಸ್ಥೆ ಆಹಾರ ಪ್ರಿಯರಿಗಾಗಿ ತನ್ನ ಈ ಹೊಸ ಬಗೆಯ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದೆ.
ಚೀನಾದ ಪಿಜ್ಜಾ ಹಟ್ ʼಗಾಬ್ಲಿನ್ ಪಿಜ್ಜಾʼ ಎಂಬ ಹೆಸರಿನ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದೆ. ನವೆಂಬರ್ 18 ರಂದು ಈ ಪಿಜ್ಜಾವನ್ನು ಪರಿಚಯಿಸಲಾಗಿದ್ದು, ಚೀನಾದ ಮೂರು ಪಿಜ್ಜಾ ಹಟ್ ‘ಔಟ್ ಲೆಟ್’ ಗಳಲ್ಲಿ ಈ ಗಾಬ್ಲಿನ್ ಪಿಜ್ಜಾ ಲಭ್ಯವಿದೆ. ಇದರ ಬೆಲೆ 169 ಯುವಾನ್ (ಅಂದಾಜು 2,000 ರೂ.) ಆಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಜೇಮ್ಸ್ ವಾಕರ್ (jwalkermobile) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಚೀನಾದಲ್ಲಿ ಈಗ ಅಗ್ರಸ್ಥಾನದಲ್ಲಿರುವ ಈ ಕಪ್ಪೆ ಪಿಜ್ಜಾವನ್ನು ನೀವು ಪ್ರಯತ್ನಿಸುವಿರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಪಿಜ್ಜಾದ ಮೇಲೆ ಟಾಪಿಂಗ್ ರೀತಿಯಲ್ಲಿ ಡೀಪ್ ಫ್ರೈಡ್ ಕಪ್ಪೆಯನ್ನು ಇಟ್ಟಿರುವಂತಹ ದೃಶ್ಯವನ್ನು ಕಾಣಬಹುದು.
Click