ನ್ಯೂಸ್ ನಾಟೌಟ್ : ಕರ್ತವ್ಯದ ಅವಧಿ ಮುಗಿಯಿತು ಎಂದು ಹೇಳಿ ಪ್ಯಾರಿಸ್ ನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಏರ್ ಇಂಡಿಯಾ ವಿಮಾನದ ಪೈಲಟ್ ರಾಜಸ್ಥಾನದ ಜೈಪುರದಲ್ಲಿ ಇಳಿಸಿ, ನಂತರ ಎದ್ದು ಹೋದ ಘಟನೆ ನಡೆದಿದೆ. ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕರನ್ನು ಜೈಪುರದಿಂದ ದೆಹಲಿಗೆ ಬಸ್ ಮೂಲಕ ಕಳುಹಿಸಿಕೊಡಲಾಗಿದೆ. (air india pilot)
ಭಾನುವಾರ ರಾತ್ರಿ 10 ಗಂಟೆಗೆ ಪ್ಯಾರಿಸ್ ನಿಂದ ಹೊರಟಿದ್ದ ವಿಮಾನ ನವದೆಹಲಿಗೆ ಸೋಮವಾರ ಬೆಳಗ್ಗೆ 10.35ಕ್ಕೆ ತಲುಪಬೇಕಾಗಿತ್ತು. ಆದರೆ, ನವದೆಹಲಿಯಲ್ಲಿ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಿಮಾನವನ್ನು ಜೈಪುರದಲ್ಲಿ ಲ್ಯಾಂಡ್ ಮಾಡಲು ಸೂಚಿಸಲಾಗಿತ್ತು. ಅಲ್ಲಿಂದ ಮತ್ತೆ ನವದೆಹಲಿಗೆ ವಿಮಾನ ಹಾರಬೇಕಿತ್ತು. ಆದರೆ, ಅಷ್ಟರಲ್ಲಿ ಪೈಲಟ್ ತನ್ನ ಕೆಲಸದ ಅವಧಿ ಮುಕ್ತಾಯವಾಗಿದೆ, ಹಾಗಾಗಿ ನಾನು ವಿಮಾನ ಚಲಾಯಿಸಲ್ಲ ಎಂದು ಹೇಳಿ ಹೊರಟುಹೋಗಿದ್ದಾರೆ. ಕೊನೆಗೆ, ಪ್ರಯಾಣಿಕರನ್ನು ಬಸ್ ಮೂಲಕ ದೆಹಲಿಗೆ ಕಳುಹಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.
Click