- +91 73497 60202
- [email protected]
- November 26, 2024 8:04 PM
ಇನ್ನು ಮುಂದೆ ಪಾನ್ ಕಾರ್ಡ್ ನಲ್ಲೂ ಇರಲಿದೆ QR ಕೋಡ್..! ಏನಿದು ಪಾನ್ ಕಾರ್ಡ್ 2.0 ಯೋಜನೆ..?
ನ್ಯೂಸ್ ನಾಟೌಟ್: ಪಾನ್ ಕಾರ್ಡ್ 2.0 ಯೋಜನೆ ಜಾರಿಯಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಇನ್ನು ಮುಂದೆ PAN ಕಾರ್ಡ್ ಗಳು ಹೆಚ್ಚಿನ ಕಾರ್ಯಶೀಲತೆ ಮತ್ತು ಭದ್ರತೆಗಾಗಿ QR ಕೋಡ್ ಅನ್ನು ಒಳಗೊಂಡಿರಲಿದೆ ಎಂದು ಮಾಹಿತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಪಾನ್ ಕಾರ್ಡ್ 2.0 ಯೋಜನೆಯಿಂದ ಅಸ್ತಿತ್ವದಲ್ಲಿರುವ PAN ವ್ಯವಸ್ಥೆಯಲ್ಲಿ ಗಮನಾರ್ಹವಾಗಿ ಅಪ್ಗ್ರೇಡ್ ಆಗಲಿದೆ. ಪಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಇದರಿಂದ ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತ್ವರಿತ ಸೇವೆಗಳನ್ನು ಒದಗಿಸುವ ಜೊತೆಗೆ ಗುಣಮಟ್ಟವೂ ಸುಧಾರಿಸಲಿದೆ ಎಂದು ಹೇಳಲಾಗಿದೆ. PAN 2.0 ಪ್ರಸ್ತುತ PAN ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂ. ವ್ಯಯಿಸಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ