ನ್ಯೂಸ್ ನಾಟೌಟ್ : ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುವ ಪಾಕಿಸ್ತಾನಲ್ಲೇ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ. ಡಿ ಚೌಕ್ ಬಳಿ ಕಂಟೈನರ್ ಮೇಲೆ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನ ಸೇನೆ ಎತ್ತಿ ಕೆಳಕ್ಕೆ ಎಸೆದಿದ್ದಾರೆ. ಶಾಂತಿಯುತ ಪ್ರತಿಭಟನೆಯ ವೇಳೆ ವ್ಯಕ್ತಿಯೋರ್ವ ನಮಾಜ್ ಮಾಡಲು ಪಕ್ಕಕ್ಕೆ ಹೋಗಿ ಕುಳಿತಿದ್ದನು. ಇದನ್ನು ಗಮನಿಸಿದ ಪಾಕಿಸ್ತಾನಿ ರೇಂಜರ್ ಗಳು ಆತನನ್ನು ಮೇಲಿಂದ ಕೆಳಕ್ಕೆ ಎಸೆದಿದ್ದಾರೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಮಾಜಿ ಪ್ರದಾನಿಯ ಬಿಡುಗಡೆಗೆ ಒತ್ತಾಯಿಸಿ ಶುರುವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದ್ದನು. ಅಲ್ಲಿದ್ದವರು ಈ ಯುವಕನೊಬ್ಬನೇ ಹೋಗಿ ನಮಾಜ್ ಮಾಡುವುದನ್ನು ನೋಡಿದ ಪಾಕಿಸ್ತಾನಿ ರೇಂಜರ್ಗಳ ಗುಂಪು ಆಯುಧಗಳು ಮತ್ತು ದೊಣ್ಣೆಗಳೊಂದಿಗೆ ಓಡಿದೆ. ಆತನನ್ನು ಕಂಟೈನರ್ ನಿಂದ ಕೆಳಕ್ಕೆ ದೂಡಿ ಕ್ರೌರ್ಯ ಮೆರೆದಿದ್ದಾರೆ.
ಆತ ಕತ್ತು ಮುರಿದು ಸಾವನ್ನಪ್ಪಿದ್ದಾನೆ. ಈ ಮುಸ್ಲಿಂ ಯುವಕನನ್ನು ಕಂಟೈನರ್ನಿಂದ ಎಸೆದ ನಂತರ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.