- +91 73497 60202
- [email protected]
- November 23, 2024 1:38 AM
ಇಂದು(ನ.22) 10 ನಕ್ಸಲೀಯರ ಎನ್ ಕೌಂಟರ್..! ಶೋಧ ಕಾರ್ಯಾಚರಣೆ ಮತ್ತಷ್ಟು ತೀವ್ರ..!
ನ್ಯೂಸ್ ನಾಟೌಟ್: ಛತ್ತೀಸ್ ಗಢ ರಾಜ್ಯದ ರಾಯ್ ಪುರದಿಂದ ದಕ್ಷಿಣಕ್ಕೆ 500 ಕಿಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ “ಭಂಡಾರ್‌ಪ ದರ್-ಕೊರಾಜುಗುಡ-ನಗರಂ” ನ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಇಂದು (ನ.22) ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ)ಯ ಕನಿಷ್ಠ 10 ನಕ್ಸಲೀಯರು ಹತ್ಯೆಗೀಡಾಗಿದ್ದಾರೆ. ಕೊಂಟಾ ಮತ್ತು ಕಿಸ್ತಾರಾಮ್ ಪ್ರದೇಶದ ಮಾವೋವಾದಿಗಳ ಗುಂಪಿಗೆ ಸೇರಿದ ನಕ್ಸಲರ ಇರುವಿಕೆಯ ಬಗ್ಗೆ ಸುಳಿವಿನ ಮೇರೆಗೆ ಸುಕ್ಮಾ ಪ್ರದೇಶದ ನಿರ್ದಿಷ್ಟ ಸ್ಥಳಗಳಲ್ಲಿ ನಿನ್ನೆ ಭದ್ರತಾ ಪಡೆ ಬೀಡುಬಿಟ್ಟಿತ್ತು. ಜಿಲ್ಲಾ ರಿಸರ್ವ್ ಗಾರ್ಡ್ (DRG) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡ ಯೋಜಿತ ಕಾರ್ಯಾಚರಣೆಯಲ್ಲಿ ಈ ಎನ್ ಕೌಂಟರ್ ನಡೆದಿದೆ. ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭೀಕರ ಎನ್ ಕೌಂಟರ್ ನಡೆದು ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೆ ಹತ್ತು ಮಾವೋವಾದಿಗಳ ಶವಗಳನ್ನು ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಬಸ್ತಾರ್ ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರದೇಶದಲ್ಲಿ ಇನ್ನಷ್ಟು ಭದ್ರತಾ ಪಡೆ ಯೋಧರನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎನ್ನಲಾಗಿದೆ. ಪ್ರದೇಶದಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರಿದಿದೆ. ವಶಪಡಿಸಿಕೊಂಡ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಎನ್ ಕೌಂಟರ್ ಸ್ಥಳದಿಂದ ಮೂರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು-ಎಕೆ-47, ಆಕ್ರಮಣಕಾರಿ ರೈಫಲ್ ಇನ್ಸಾಸ್ ಮತ್ತು ಸೆಲ್ಫ್-ಲೋಡಿಂಗ್ ರೈಫಲ್ (SLR) ಜೊತೆಗೆ ಇತರ ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ