ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಾನೆಯ ಉಪಟಳ ತೀರ ಹೆಚ್ಚಾಗುತ್ತಿದೆ. ಅದರಲ್ಲೂ ಸುಳ್ಯ ಸುತ್ತಮುತ್ತ ಕಾಡಾನೆಗಳು ನಿರಂತರವಾಗಿ ನಗರದತ್ತ ನುಗ್ಗಿ ಬರುತ್ತಿವೆ. ಮಾತ್ರವಲ್ಲ ಕೃಷಿಕರಿಗೆ ನಿತ್ಯ ಉಪಟಳವನ್ನು ನೀಡುತ್ತಿದೆ. ಇದೀಗ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ಅಡಚಣೆ ಉಂಟು ಮಾಡುತ್ತಿವೆ.
ಸುಳ್ಯ ತಾಲೂಕಿನ ಮರ್ಕಂಜದ ಬೊಮ್ಮಾರು ಹಾಗೂ ದೊಡ್ಡತೋಟದ ರಸ್ತೆಯ ನಡು ದಾರಿಯಲ್ಲಿ ಸುಳ್ಯದ ಎಸ್ ಎಂ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಇಳಿಸಿ ವಾಪಸ್ ಬರುತ್ತಿರುವಾಗ ಸೋಮವಾರ ರಾತ್ರಿ ೭.೩೦ ರ ಸಂದರ್ಭ ಮೂರು ಕಾಡಾನೆಗಳು ಬಸ್ ಗೆ ಅಡ್ಡಲಾಗಿ ರಸ್ತೆಯಲ್ಲಿ ನಿಂತಿದ್ದವು, 20 ನಿಮಿಷ ಬಸ್ ಅನ್ನು ಮುಂದಕ್ಕೆ ಹೋಗುವುದಕ್ಕೆ ಕಾಡಾನೆಗಳು ಬಿಡಲಿಲ್ಲ. ಚಾಲಕ ಹಾಗೂ ಕಂಡೆಕ್ಟರ್ ಮಾತ್ರ ಬಸ್ ನಲ್ಲಿದ್ದರು. ಗಾಬರಿಗೊಳಗಾದ ಅವರು ಬಸ್ ಲೈಟ್ ಆಫ್ ಮಾಡಿ ಸುಮ್ಮನೆ ಕುಳಿತುಕೊಂಡರು, ಸುಮಾರು 20 ನಿಮಿಷದ ಬಳಿಕ ಕಾಡಾನೆಗಳು ಸ್ಥಳದಿಂದ ತೆರಳಿದವು ಎಂದು ತಿಳಿದು ಬಂದಿದೆ.