ಮಂಗಳೂರು: ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..! ವೆನ್ಲಾಕ್ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ

ನ್ಯೂಸ್‌ ನಾಟೌಟ್‌: ಮಂಗಳೂರಿನ ಸೋಮೇಶ್ವರದ ರುದ್ರಬಂಡೆಯಿಂದ ಸಮುದ್ರಕ್ಕೆ ಹಾರಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು(ನ.24) ನಡೆದಿದೆ. ಯುವತಿ ಸಮುದ್ರಕ್ಕೆ ಹಾರಿವುದನ್ನು ಸ್ಥಳೀಯ ಮೀನುಗಾರರು ಕಂಡು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣೆ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.