ಮಹೀಂದ್ರ ಥಾರ್​ ಖರೀದಿಸಿದ ಖುಷಿಗೆ ಶೋರೂಂನಲ್ಲೇ ಗುಂಡು ಹಾರಿಸಿ ಸಂಭ್ರಮಿಸಿದ ಯುವಕ..! ನೆಟ್ಟಿಗರಿಂದ ಆಕ್ರೋಶ, ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಮಹೀಂದ್ರ ಥಾರ್ ರೋಕ್ಸ್ ಖರೀದಿಸಿದ್ದನ್ನು ಸಂಭ್ರಮಿಸಲು ವ್ಯಕ್ತಿಯೊಬ್ಬ ಕಾರಿನ ಸನ್ ​ರೂಫ್ ​ನಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಆನ್‌ ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಹೂವಿನಿಂದ ಅಲಂಕೃತವಾದ ಥಾರ್ ರೋಕ್ಸ್ ಮೇಲೆ ನಿಂತಿರುವ ವ್ಯಕ್ತಿ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನವೆಂಬರ್ 18 ರಂದು ಮಧ್ಯಪ್ರದೇಶದ ಮಹೀಂದ್ರಾ ಡೀಲರ್‌ ಶಿಪ್‌ ನಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಶೋರೂಂನ ಸಿಬ್ಬಂದಿ ನೋಡುತ್ತಾ ನಿಂತಿದ್ದಾರೆಯೇ ವಿನಃ ಯಾರೂ ತಡೆಯಲಿಲ್ಲ ಎನ್ನಲಾಗಿದೆ. ಈ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ. Click