ನ್ಯೂಸ್ ನಾಟೌಟ್: ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ವೆಲೆನ್ಸಿಯಾದ ‘ಫ್ರೆಡ್ರೋಸ್ ಎನ್ ಕ್ಲೇವ್’ ವಸತಿ ಸಮುಚ್ಚಯದಲ್ಲಿ ಹೊಂದಿರುವ ಮನೆ ಹಾಗೂ ನಗರದ ಮಲ್ಲಿಕಟ್ಟೆಯ ಜುಗುಲ್ ಟವರ್ಸ್ ಕಟ್ಟಡದಲ್ಲಿರುವ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ(ನ.21) ದಾಳಿ ನಡೆಸಿದ್ದಾರೆ.
ನಗದು ಹಾಗೂ ಚಿನ್ನಾಭರಣಗಳು ದಾಳಿ ವೇಳೆ ಪತ್ತೆಯಾಗಿವೆ. ಅವರು ಕೆಲವು ಕಡೆ ಆಸ್ತಿಗಳನ್ನು ಹೊಂದಿರುವ ವಿವರಗಳು ಸಿಕ್ಕಿವೆ ಎನ್ನಲಾಗಿದೆ.
ಪತ್ತೆಯಾದ ನಗದು ಹಾಗೂ ಚಿನ್ನಾಭರಣ ಹಾಗೂ ಆಸ್ತಿಗಳ ವಿವರಗಳನ್ನು ಲೋಕಾಯುಕ್ತ ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಕೃಷ್ಣವೇಣಿಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾಗ ಅವರ ವಿರುದ್ಧ ಆದಾಯಕ್ಕಿಂತ ಮೀರಿ ಆಸ್ತಿ ಹೊಂದಿರುವ ಕುರಿತು ದೂರು ದಾಖಲಾಗಿತ್ತು. ಇದರ ಆಧಾರದಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
Click