ನ್ಯೂಸ್ ನಾಟೌಟ್: ಸಾವಿರಾರು ಜನರ ನಂಬಿಕೆಯ ಪ್ರತೀಕವಾದ ಬಯಲು ಗಣಪ ಬೆಳ್ತಂಗಡಿಯ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅವ್ಯವಹಾರದ ಅನುಮಾನ ಬಲವಾಗಿದೆ.
ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಲಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯಿಂದ ನ.11ರಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸತ್ಯಾಗ್ರಹವನ್ನು ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ನ ಲಕ್ಷ್ಮೀಶ ಗಬ್ಬಲಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ, ಉಪಾಧ್ಯಕ್ಷರುಗಳಾದ ಕೃಷ್ಣ ಭಟ್ ಕುಡ್ತಲಾಜೆ, ತುಕ್ರಪ್ಪ ಶೆಟ್ಟಿ ನೂಜಿ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ್ ಶೆಟ್ಟಿ ನೆಲ್ಯಾಡಿ, ಕಾರ್ಯದರ್ಶಿ ಶ್ಯಾಮರಾಜ್, ಕೋಶಾಧಿಕಾರಿ ವಿಶ್ವನಾಥ್ ಕೊಲ್ಲಾಜೆ, ಶ್ರೀವತ್ಸ ಕುಡ್ತಲಾಜೆ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಕೊಕ್ಕಡ ವಲಯ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ ಗೌಡ ಅಡ್ಕಾಡಿ, ದ.ಕ ಹವ್ಯಾಕ ಬಂಧುಗಳ ಮಾಣಿ ಮಠದ ವೈದಿಕ ಕೇಶವ ಪ್ರಸಾದ್, ನೆಲ್ಯಾಡಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸರ್ವೋತ್ತಮ ಗೌಡ, ಸಾಮಾಜಿಕ ಮುಖಂಡ ಬಿ ಎಂ ಭಟ್, ಗೋಪಾಲ ಕೃಷ್ಣ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಹಾಲಿ ಸದಸ್ಯ ವೆಂಕಪ್ಪ ಪೂಜಾರಿ, ಬೆಳ್ತಂಗಡಿ ಗುರು ನಾರಾಯಣ ಸೇವಾ ಸಂಘದ ಜಯ ವಿಕ್ರಮ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರೂಪೇಶ್ ರೈ ಆಲಿಮಾರ್, ಸಹಕಾರ್ಯದರ್ಶಿಗಳಾದ ಸುನೀಶ್ ನಾಯ್ಕ, ದಯಾನೀಶ್ ಕೊಕ್ಕಡ, ಗಣೇಶ್ ಕಾಶಿ, ಕೊಕ್ಕಡ ಸಮಿತಿ ಸದಸ್ಯರುಗಳಾದ ಲಕ್ಷ್ಮೀನಾರಾಯಣ ಉಪ್ಪರ್ಣ, ಗೋಪಾಲ ಕೃಷ್ಣ ಭಟ್ ಮುನ್ನಡ್ಕ, ಜಾರಪ್ಪ ಗೌಡ ಸಂಕೇಶ, ಎ.ಎನ್.ಶಬರಾಯ, ಚರಣ್ ಕೊಕ್ಕಡ, ಪದ್ಮನಾಭ ಆಚಾರ್ಯ, ಗಣೇಶ್ ಪಿ.ಕೆ, ಧನಂಜಯ ಗೌಡ ಪಟ್ರಮೆ, ಧರ್ಮರಾಜ್ ಅಡ್ಕಾಡಿ, ಶೀನ ನಾಯ್ಕ, ಲಕ್ಷ್ಮಿನಾರಾಯಣ, ಕೃಷ್ಣಪ್ಪ ಗೌಡ ಪೂವಾಜೆ, ವಿಶ್ವನಾಥ ಮೀಯಾಳ, ಗಣೇಶ್ ಪೂಜಾರಿ, ಜಯಂತ ಗೌಡ ಮಾಸ್ತಿಕಲ್ಲು, ಪ್ರಗತಿಪರ ಕೃಷಿಕ ಯೋಗೀಶ್ ಕೋಡಿಂಬಾಡಿ, ಶಿವಪ್ರಸಾದ್, ಪ್ರಭಾಕರ ಸಾಮಾನಿ ಮುಂತಾದವರು ಭಾಗವಹಿಸಿದ್ದಾರೆ.