ನ್ಯೂಸ್ ನಾಟೌಟ್: ತನ್ನ ಕಾಯಿಲೆ ಗುಣವಾಗಲಿಲ್ಲ ಎಂದು ದಿನ ನಿತ್ಯ ಸಾವಿರಾರು ರೋಗಿಗಳು ಮನಸ್ಸಿನಲ್ಲೇ ವ್ಯಥೆ ಪಡುತ್ತಿರುತ್ತಾರೆ. ಅಂತಹ ರೋಗಿಗಳ ಮನಸ್ಸನ್ನು ಖುಷಿಗೊಳಿಸಬೇಕು ಅನ್ನುವ ಕಾರಣಕ್ಕೆ ಕೇರಳದ ಕೋಝಿಕ್ಕೊಡ್ ನಲ್ಲಿ ಒಂದು ವಿನೂತನ ಪ್ರಯೋಗ ನಡೆಸಲಾಗಿದೆ. ನೂರಕ್ಕೂ ಹೆಚ್ಚು ನಿತ್ಯ ರೋಗಿಗಳನ್ನು ಆಂಬ್ಯುಲೆನ್ಸ್ ಮೂಲಕ ಬೀಚ್ ಗೆ ಕರೆದುಕೊಂಡು ಬಂದು ಕೆಲವು ಸಮಯಗಳ ಕಾಲ ಪರಸ್ಪರ ಖುಷಿ ಹಂಚಿಕೊಳ್ಳುವ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೇರಳ ಅಂಬುಲನ್ಸ್ ವರ್ಕರ್ಸ್ ಯೂನಿಯನ್ STU ಸಹಕಾರದೊಂದಿಗೆ ವಿವಿಧ ಮುಸ್ಲಿಂ ಸಂಘಟನೆ ಗಳ ನೇತೃತ್ವದಲ್ಲಿ ಕಾರ್ಯಾಚರಿಸುವ ಅತ್ತಾನಿ ಎಂಬ ಪಾಲಿಯೇಟಿವ್ ಕೇರ್ ಸಂಸ್ಥೆಯ ನೂರಕ್ಕೂ ಅಧಿಕ ರೋಗಿಗಳನ್ನು ಹಲವಾರು ಆಂಬ್ಯುಲೆನ್ಸ್ ಮೂಲಕ ಬೀಚ್ ಗೆ ಕರೆದುಕೊಂಡು ಬರಲಾಯಿತು.
ಒಂದು ದಿನದ ಪ್ರವಾಸ ಮಹಳಷ್ಟು ಅವಿಸ್ಮರಣೀಯವಾಗಿತ್ತು ಎಂದು STU ಕರ್ನಾಟಕ ರಾಜ್ಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಟರ್ಲಿ ಅವರು, ‘ರೋಗಿಗಳ ಮನಸ್ಸಿನಲ್ಲಿ ಖುಷಿ ಹೆಚ್ಚಲಿ, ತಮಗೆ ಯಾವ ಕಾಯಿಲೆಯೂ ಇಲ್ಲ ಅನ್ನುವ ಜೀವನೋತ್ಸಾಹ ತುಂಬಲಿ ಅನ್ನುವ ಕಾರಣಕ್ಕೆ ಇಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
Click