- +91 73497 60202
- [email protected]
- November 6, 2024 2:58 AM
ವಿಕಿಪೀಡಿಯಕ್ಕೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ..! ವಿಕಿಪೀಡಿಯದಲ್ಲಿ ಹಲವು ವಿಚಾರಗಳ ಬಗ್ಗೆ ತಪ್ಪು ಮಾಹಿತಿ..?
ನ್ಯೂಸ್ ನಾಟೌಟ್: ವೆಬ್ ಪುಟದ ಲೇಖನಗಳಲ್ಲಿನ ಅಸ್ಪಷ್ಟತೆ ಮತ್ತು ಪಕ್ಷಪಾತದ ಆರೋಪಗಳ ಕುರಿತು ವಿವರಿಸುವಂತೆ ವಿಕಿಪೀಡಿಯಾಕ್ಕೆ ಭಾರತ ಸರ್ಕಾರ ಮಂಗಳವಾರ(ನ.5) ನೋಟಿಸ್ ನೀಡಿದೆ. ವಿಕಿಪೀಡಿಯದಲ್ಲಿನ ಪಕ್ಷಪಾತ ಮತ್ತು ತಪ್ಪುಗಳ ಬಗ್ಗೆ ಅನೇಕ ದೂರುಗಳನ್ನು ಸ್ವೀಕರಿಸಿದ ಬಳಿಕ ಕೇಂದ್ರ ಸರಕಾರ ವಿಕಿಪೀಡಿಯಾಕ್ಕೆ ನೋಟಿಸ್ ನೀಡಿದೆ. ವಿಕಿಪೀಡಿಯಾವನ್ನು ಮಧ್ಯವರ್ತಿ ಬದಲಿಗೆ ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ವಿವರಣೆ ನೀಡುವಂತೆ ಕೋರಿದೆ.ಉಚಿತ ಆನ್ಲೈನ್ ವಿಶ್ವಕೋಶ ಎಂದು ಕರೆಯಲ್ಪಡುವ ವಿಕಿಪೀಡಿಯಾವು ಜನರು, ಸಮಸ್ಯೆಗಳು ಮತ್ತು ವಿವಿಧ ಕ್ಷೇತ್ರಗಳ ವಿಚಾರಗಳ ಕುರಿತು ಪುಟಗಳನ್ನು ರಚಿಸಲು ಮತ್ತು ಸಂಪಾದಿಸಲು ಅನುಮತಿಸುತ್ತದೆ. ಈ ಮೊದಲು ವಿಕಿಪೀಡಿಯಾದ ಪುಟವೊಂದು ತನ್ನ ಬಗ್ಗೆ ಮಾನಹಾನಿಕರ ವಿವರಣೆಯನ್ನು ಹೊಂದಿದೆ ಎಂದು ಆರೋಪಿಸಿ ಎ.ಎನ್.ಐ ಮೊಕದ್ದಮೆಯನ್ನು ದಾಖಲಿಸಿತ್ತು. ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಿಕಿಮೀಡಿಯಾ ಫೌಂಡೇಷನ್ ಗೆ ಸಮನ್ಸ್ ಹೊರಡಿಸಿತ್ತು. ANI ಕುರಿತು ಮಾನಹಾನಿಕರವಾಗಿ ಮಾಹಿತಿ ಎಡಿಟ್ ಮಾಡಿರುವ ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ನಿರಾಕರಿಸಿದ ವಿಕಿಪೀಡಿಯಕ್ಕೆ ದಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರವೂ ನೋಟಿಸ್ ನೀಡಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ