ನಿನ್ನ ನೋಡ್ಬೇಕು ಎಂದು ಕರೆದು ಪ್ರಿಯತಮನನ್ನೇ ಕಿಡ್ನ್ಯಾಪ್‌ ಮಾಡಿದ ಪ್ರೇಯಸಿ..! ಅವರು ಸಿಕ್ಕಿಬಿದ್ದದ್ದೇ ರೋಚಕ..!

ನ್ಯೂಸ್‌ ನಾಟೌಟ್‌: ಪ್ರಿಯತಮೆಯನ್ನು ಭೇಟಿ ಮಾಡೋಕೆ ಬಂದಿದ್ದವನನ್ನ ಕಿಡ್ನ್ಯಾಪ್‌ ಮಾಡಿ ಸುಲಿಗೆ ಮಾಡಿ ಸಿನಿಮೀಯ ರೀತಿಯಲ್ಲಿ ಆಕೆ ಸಿಕ್ಕಿಹಾಕಿಕೊಂಡ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್‌ ಪಿನ್‌ ಎಂದು ತಿಳಿದು ಪ್ರಿಯಕರ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಹತ್ರ ಇರುವ ಚಿನ್ನಾಭರಣ ಹಾಕ್ಕೊಂಡು, ಇನ್ನೋವಾ ಕಾರಿನಲ್ಲಿ ಬಾ ಅಂತಾ ಫೋನ್‌ ಮಾಡಿದ್ದಾಳೆ. ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ. ಈ ವೇಳೆ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಕಿಡ್ನ್ಯಾಪ್ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್‌ನಲ್ಲಿದ್ದ ಪಿಎಸ್‌ ಐ ಮಾದೇಶ್‌ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.