ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕನ್ನಡ ಅನ್ನೋದು ಕಣ್ಮರೆಯಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ತಿಳಿಸಿದ್ದಾರೆ.
ಸುಳ್ಯ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ರಾಜಾಶ್ರಯ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಎಲ್ಲರು ಚಿಂತನೆ ನಡೆಸಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಪೇರಾಲು, ಸಭೆಯ ಅಧ್ಯಕ್ಷತೆಯನ್ನು ಚಂದ್ರಾವತಿ ಬಡ್ಡಡ್ಕ ವಹಿಸಿದ್ದರು. ವೇದಿಕೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಗೌರವಾಧ್ಯಕ್ಷ ಡಾ.ರಂಗಯ್ಯ ಎಸ್ , ಕಸಾಪದ ಕೋಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಲೀಲಾ ದಾಮೋದರ ಸ್ವಾಗತಿಸಿ ಅಬ್ದುಲ್ಲಾ ಅರಂತೋಡು ವಂದಿಸಿದರು. ಕೆಆರ್ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ತದನಂತರ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಲಾವಿದರಿಂದ ಸುಶ್ರಾವ್ಯವಾದ ಗೀತ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಸಿಎ ಗಣೇಶ್ ಭಟ್, ಕೇಶವ ಸಿಎ, ಪ್ರೊ. ದಾಮೋದರ ಗೌಡ, ಡಾ. ಪೂವಪ್ಪ ಕಣಿಯೂರು, ಕುಮಾರಸ್ವಾಮಿ ತೆಕ್ಕುಂಜ ಪ್ರಭಾಕರ ಕಿರಿಭಾಗ , ಹೇಮಾವತಿ ದೇಂಗೋಡಿ, ಗಿರಿಜಾ ಎಂ ವಿ, ತೇಜಸ್ವಿನಿ ಕಿರಣ್, ಚೇತನಾ ನೇಮಿರಾಜ್, ಸುಭಾಶ್, ಸಂಧ್ಯಾ ಮಂಡೇಕೊಲು ಮತ್ತು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.