ಜ್ಯೂಸ್‌ ಜೊತೆಗೆ ಪ್ಲಾಸ್ಟಿಕ್‌ ಲೋಟಕ್ಕೂ 40 ರೂ. ಚಾರ್ಜ್‌ ಮಾಡಿದ ರೆಸ್ಟೋರೆಂಟ್‌..! ಇಲ್ಲಿದೆ ವೈರಲ್ ಪೋಸ್ಟ್

ನ್ಯೂಸ್ ನಾಟೌಟ್: ರೆಸ್ಟೋರೆಂಟ್‌ ನಲ್ಲಿ ಗ್ರಾಹಕರು ಕೊಳ್ಳುವ ಜ್ಯೂಸ್‌ ಗಳಿಗೆ ಬಿಲ್‌ ಹಾಕುವುದು ಮಾತ್ರವಲ್ಲದೆ, ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೂ ಬರೋಬ್ಬರಿ 40 ರೂ. ಬಿಲ್‌ ಹಾಕುವ ಮೂಲಕ ಗ್ರಾಹಕರಿಂದ ಹಣ ಲೂಟಿ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೆ. ಈ ಪ್ಲಾಸ್ಟಿಕ್‌ ಲೋಟಕ್ಕೂ 40ರೂ ಬಿಲ್‌ ಹಾಕ್ತಾರೆ ಎಂಬ ವಿಚಾರ ತಿಳಿದು ಗ್ರಾಹಕರೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮುಂಬೈನ ಥಾಣೆಯ ವಿವಿಯನ್‌ ಮಾಲ್‌ ನಲ್ಲಿರುವ ಶಾಹಿ ದರ್ಬಾರ್‌ ರೆಸ್ಟೋರೆಂಟ್‌ ಜ್ಯೂಸ್‌ ಜೊತೆಗೆ ಒಂದು ಪ್ಲಾಸ್ಟಿಕ್‌ ಲೋಟಕ್ಕೂ ಬರೋಬ್ಬರಿ 40 ರೂ. ಚಾರ್ಜ್‌ ಮಾಡಿದೆ. ಈ ಬಿಲ್‌ ಫೋಟೋವನ್ನು ಮುಂಬೈ ನಿವಾಸಿ ರವಿ ಹಾಂಡಾ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಜ್ಯೂಸ್‌ ಕುಡಿದ ಮೇಲೆ ಬಿಸಾಡುವಂತಹ ಪ್ಲಾಸ್ಟಿಕ್‌ ಗ್ಲಾಸ್‌ಗೆ 40 ರೂ. ಚಾರ್ಜ್‌ ಮಾಡುವವರಿದ್ದಾರೆಯೇ? ಮುಂಬೈ ತುಂಬಾ ದುಬಾರಿ ಎಂದು ಗೊತ್ತಿತ್ತು, ಆದ್ರೆ ಹೀಗೆ ಅನ್ನೋ ವಿಚಾರ ಗೊತ್ತಿರಲಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ರೆಸ್ಟೋರೆಂಟ್‌ ಬಿಲ್‌ ಫೋಟೋದಲ್ಲಿ ಒಂದು ಮ್ಯಾಂಗೋ ಜ್ಯೂಸ್‌ ಗೆ 250 ರಂತೆ ಹಾಗೂ ಜ್ಯೂಸ್‌ ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಲೋಟಕ್ಕೆ ಒಂದಕ್ಕೆ 40 ರೂ. ನಂತೆ ಜಾರ್ಚ್‌ ಮಾಡಿರುವ ಫೋಟೋ ಕಾಣಬಹುದು. Click