ನ್ಯೂಸ್ ನಾಟೌಟ್: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬ್ಯಾಂಕ್ ನಲ್ಲಿ ಒಟ್ಟು 1,000 ಹುದ್ದೆಗಳು ಖಾಲಿಯಿದ್ದು, ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ನವೆಂಬರ್ 16 ರೊಳಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
- ಹುದ್ದೆಯ ಹೆಸರು : ಎಕ್ಸಿಕ್ಯೂಟಿವ್- ಸೇಲ್ಸ್ ಹಾಗೂ ಆಪರೇಷನ್ಸ್, * ಖಾಲಿಯಿರುವ ಹುದ್ದೆಗಳು : 1000, * ಸಂಬಳ ಮೊದಲ ವರ್ಷ – ತಿಂಗಳಿಗೆ ರೂ 29000, * ಎರಡನೇ ವರ್ಷ- ರೂ 31,300 ಎಂದು ತಿಳಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು: 20 ವರ್ಷಗಳು, ಗರಿಷ್ಠ ವಯಸ್ಸು: 25 ವರ್ಷಗಳಾಗಿರಬೇಕು ಎಂದು ಮಾಹಿತಿ ನೀಡಲಾಗಿದೆ. ಸರ್ಕಾರದ ಮಾನದಂಡಗಳ ಪ್ರಕಾರ ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. - ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅಭ್ಯರ್ಥಿಯು ಕಂಪ್ಯೂಟರ್ ಗಳ ಕೆಲಸದ ಜ್ಞಾನವನ್ನು ಹೊಂದಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಭಾವಚಿತ್ರ ಇನ್ನಿತ್ತರ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ.
- ಐಡಿಬಿಐ ಎಕ್ಸಿಕ್ಯೂಟಿವ್ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಹಾಗೂ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಸಾಮಾನ್ಯ ಅರ್ಹತೆ, ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1050 ಹಾಗೂ ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.250. ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.
- ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-11-2024, ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 16-11-2024. ಹೆಚ್ಚಿನ ಮಾಹಿತಿಗೆ IDBI ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಪರಿಶೀಲಿಸಲು ತಿಳಿಸಲಾಗಿದೆ.
Click