ನ್ಯೂಸ್ ನಾಟೌಟ್ : ಹಿಜಾಬ್ ವಿರೋಧಿಸಿ ಯುವತಿಯೊಬ್ಬಳು ತನ್ನ ಬಟ್ಟೆಗಳನ್ನು ಕಳಚಿ ತಿರುಗಾಡುತ್ತಾ ಪ್ರತಿಭಟಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನೇಕ ದೇಶಗಳಲ್ಲಿ ಹಿಜಾಬ್ ಗೆ ವಿರೋಧ ವ್ಯಕ್ತವಾಗಿದೆ. ಈ ಪಟ್ಟಿಯಲ್ಲಿ ಇರಾನ್ ನ ಹೆಸರೂ ಕೂಡ ಇದೆ. ಇರಾನ್ ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಬಹಳ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ಆದರೂ ಇರಾನ್ ನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.
ಇರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಹುಡುಗಿಯೊಬ್ಬಳು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದಾಳೆ. ತನ್ನ ಬಟ್ಟೆ ತೆಗೆದು ಅರೆ ಬೆತ್ತಲೆಯಾಗಿ ಕುಳಿತಿರುವುದು ಮತ್ತು ಓಡಾಡಿರುವುದು ಕಂಡು ಬಂದಿದೆ. ಈ ವೀಡಿಯೋ ಇಸ್ಲಾಮಿಕ್ ದೇಶಗಳು ಸೇರಿದಂತೆ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.
ಈ ವೀಡಿಯೊ ಶನಿವಾರ(ನ.02)ದಿಂದ ಸಾಕಷ್ಟು ವೈರಲ್ ಆಗಿದೆ. ಇರಾನ್ ದೇಶದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುವ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟಿಸುತ್ತಾ ಈ ಹುಡುಗಿ ಅರೆಬೆತ್ತಲೆಯಾಗಿದ್ದಾಳೆ. ಪ್ರತಿಭಟನೆ ನಡೆಸುತ್ತಿದ್ದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇರಾನ್ ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದ ವಕ್ತಾರ ಅಮೀರ್ ಮಹ್ ಜಾಬ್, ಪೊಲೀಸರು ಹುಡುಗಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಆಕೆ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾಳೆ ಎಂದಿದ್ದಾರೆ.
Click