ನ್ಯೂಸ್ ನಾಟೌಟ್ : ಸರ್ಕಾರಿ ಫ್ರೌಢ ಶಾಲೆಗೆ ಮೀಸಲಿರಿಸಿದ ಜಾಗವನ್ನು ದೇವರ ಹೆಸರಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ರಾಯಚೂರಿನ ಚಂದ್ರಬಂಡಾ ರಸ್ತೆಯ ಎಲ್ ಬಿ ಎಸ್ ನಗರದ ಸಂತೋಷ್ ನಗರ ಬಡಾವಣೆಯಲ್ಲಿ ನಡೆದಿದೆ.
ನಗರಸಭೆಯವರು ಮೂರು ಕ್ರೇನ್ ಬಳಸಿ ಇಟ್ಟಿಗೆಯಿಂದ ನಿರ್ಮಿಸಿದ ಶೆಡ್ಡನ್ನೂ ತೆರವು ಮಾಡಿದ್ದರು. ಈ ವೇಳೆ ಶಾಲಾಜಾಗದಲ್ಲಿ ಇಟ್ಟಿದ್ದ ನಾಗರ ಮೂರ್ತಿಗಳನ್ನು ಕಾರಿನಲ್ಲಿ ಸುರಕ್ಷಿತವಾಗಿ ತೆಗೆದುಕೊಂಡು ಹೋಗಲಾಗಿದೆ.
“ಎಲ್ ಬಿ ಎಸ್ ನಗರದ ಸರ್ಕಾರಿ ಪ್ರೌಢ ಶಾಲೆಗೆ (ಕನ್ನಡ ಮಾಧ್ಯಮ) ಶಾಲಾ ಕಟ್ಟಡಕ್ಕಾಗಿ ಈ ಜಾಗವನ್ನು ಮೀಸಲಿಡಲಾಗಿದೆ. 1017 ಚದರ ಮೀಟರ್ ಗಿಂತ ಅಧಿಕ ಖಾಲಿ ನಿವೇಶನವನ್ನು ಬಡಾವಣೆಯ ಕೆಲವು ವ್ಯಕ್ತಿಗಳು ಸರ್ಕಾರಿ ಜಾಗದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಅಕ್ರಮವಾಗಿ ಟಿನ್ ಶೆಡ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ದೇವಸ್ಥಾನ ಮತ್ತು ದೇವರ ಸ್ವರೂಪವನ್ನು ನೀಡಿ ದೇವರ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ” ಎಂದು ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯ ಮುಖಂಡರು, ಹೋರಾಟಗಾರರು ಹೇಳಿಕೆ ನೀಡಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತವೇ ತೆರವುಗೊಳಿಸಲು ಮುಂದಾಗಿದ್ದು, 15 -20 ದಿನದಲ್ಲಿ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗ ಅದರಂತೆ ತೆರವುಗೊಳಿಸಲಾಗಿದೆ.
Click