ನ್ಯೂಸ್ ನಾಟೌಟ್ : ಪಂಜಾಬಿನ ಬಟಿಂಡಾ ಎಂಬಲ್ಲಿನ ರೈಕೆ ಕಲನ್ ಗ್ರಾಮದಲ್ಲಿ ಸೋಮವಾರ(ನ.11) ಭತ್ತ ಖರೀದಿ ಸಂದರ್ಭ ರೈತರ ಸಂಘವು ಸರ್ಕಾರಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪೊಲೀಸರ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಟಿಂಡಾದ ಡಿಎಸ್ಪಿ ಹರ್ಬನ್ಸ್ ಸಿಂಗ್ ಧಲಿವಾಲ್, “ರೈಕೆ ಕಲನ್ ಗ್ರಾಮದಲ್ಲಿ, ರೈತ ಸಂಘವು ಭತ್ತದ ಖರೀದಿ ಪ್ರಕ್ರಿಯೆ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಮತ್ತು ತಹಸೀಲ್ದಾರ್ ಗೆ ಘೇರಾವ್ ಹಾಕಿದೆ. ನಮ್ಮ ಪೊಲೀಸ್ ತಂಡವು ಅಲ್ಲಿಗೆ ತಲುಪಿ, ರೈತರ ವಶದಲ್ಲಿರುವ ಅಧಿಕಾರಿಗಳನ್ನು ಬಿಡಲು ವಿನಂತಿಸಿದ್ದಾರೆ. ಆದರೆ ರೈತರ ಸಂಘವು ಪಟ್ಟುಬಿಡಲಿಲ್ಲ, ಅಧಿಕಾರಿಗಳನ್ನು ಬಿಡುಗಡೆ ಮಾಡಲು ಪೊಲೀಸರು ಪ್ರಯತ್ನಿಸಿದಾಗ, ರೈತರ ಸಂಘವು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
“ನಮ್ಮ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ, ನಮ್ಮ ವಾಹನಗಳನ್ನು ಧ್ವಂಸಗೊಳಿಸಲಾಗಿದೆ, ತಹಸೀಲ್ದಾರ್ ಮತ್ತು ಇನ್ಸ್ ಪೆಕ್ಟರ್ ಅವರನ್ನು ಬಿಡುಗಡೆ ಮಾಡಲಾಗಿದೆ. ಎಎಸ್ಐ ದರ್ಜೆಯ ಅಧಿಕಾರಿಯನ್ನು ಕೊಲ್ಲುವ ಉದ್ದೇಶದಿಂದ ದೊಣ್ಣೆ, ಕಿರ್ಪಾನ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ನಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’’ ಎಂದು ಪೊಲೀಸರು ತಿಳಿಸಿದ್ದಾರೆ.
Click