ನ್ಯೂಸ್ ನಾಟೌಟ್: ಅಮೆರಿಕದಲ್ಲಿ ನವೆಂಬರ್ 5 ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ನಡುವೆ ಟ್ರಂಪ್ ಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದ್ದು, ಪಾಕಿಸ್ತಾನಿ ಯುವತಿಯೊಬ್ಬಳು ನಾನು ಟ್ರಂಪ್ ಮಗಳು ಎಂದ ವಿಡಿಯೋ ವೈರಲ್ ಆಗುತ್ತಿದೆ.
“ನಾನು ಟ್ರಂಪ್ ಮಗಳು, ಮೆಲಾನಿಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ವಾಪಸ್ ಕರೆದುಕೊಂಡು ಬಂದ್ರು ಎಂಬ ಸ್ಟೇಟ್ ಮೆಂಟ್ ನೀಡಿದ್ದಾಳೆ. ಸದ್ಯ ಈ ದೃಶ್ಯ ಸಖತ್ ವೈರಲ್ ಆಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ ತಾನು ಮುಸ್ಲಿಂ ಮತ್ತು ಪಂಜಾಬಿ ಮೂಲಕ್ಕೆ ಸೇರಿದವಳು ಆದರೆ ನನ್ನ ತಂದೆ ಟ್ರಂಪ್ ಎಂದು ಉರ್ದುವಿನಲ್ಲಿ ಹೇಳಿದ್ದಾಳೆ. ಜೊತೆಗೆ ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಬಂದ್ರು ಎಂದು ಹೇಳಿದ್ದಾಳೆ. 2018 ನೇ ಇಸವಿಯಲ್ಲಿ ನಡೆದ ಘಟನೆ ಇದಾಗಿದ್ದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
Click