ನ್ಯೂಸ್ ನಾಟೌಟ್: ದೊಡ್ಡಡ್ಕದ ಸ್ವಾಮಿ ಕೊರಗಜ್ಜ ನಂಬಿ ಬಂದ ಭಕ್ತರ ಕಾಯುವ ನಂಬಿಕೆಯ ಪ್ರತೀಕವಾಗಿದ್ದಾರೆ. ಪವಾಡಗಳ ಕ್ಷೇತ್ರವೆಂದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖ್ಯಾತಿಗಳಿಸಿರುವ ದೊಡ್ಡಡ್ಕ ಕೊರಗಜ್ಜ ಪವರ್ ಫುಲ್ ದೈವವಾಗಿ ನೆಲೆನಿಂತಿದ್ದಾರೆ. ಅಂತಹ ಕ್ಷೇತ್ರದಲ್ಲಿ ಇದೀಗ ಅಜ್ಜನ ಕಾರ್ಣಿಕದ ಶಕ್ತಿ ಎಷ್ಟಿದೆ ಅನ್ನೋದು ಮತ್ತೊಮ್ಮೆ ನಿರೂಪಿತವಾಗಿದೆ.
ಕೊಡಗಿನ ಮಡಿಕೇರಿ ಮೂಲಕ ಆಟೋ ಚಾಲಕ ರಮೇಶ್ ಹಾಗೂ ರುಕ್ಮಿಣಿ ದಂಪತಿಗೆ ಮದುವೆಯಾಗಿ 9 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಈ ದಂಪತಿಗೆ ಮಕ್ಕಳಾಗಿಲ್ಲವಲ್ಲ ಅನ್ನುವ ಕೊರಗು ಇತ್ತು. ದೊಡ್ಡಡ್ಕದ ಸನ್ನಿಧಿಗೆ ಬಂದು ಅಜ್ಜ ನಮಗೊಂದು ಮಗು ಕರುಣಿಸು, ನಿನ್ನ ಸನ್ನಿಧಿಗೆ ಬಂದು ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮ ಮಾಡುತ್ತೇವೆ ಎಂದು ಬೇಡಿಕೊಂಡಿದ್ದರು. ಈ ಪ್ರಾರ್ಥನೆ ಫಲ ನೀಡಿದ್ದು ದಂಪತಿಯ ಬಾಳಲ್ಲಿ ಗಂಡು ಮಗುವಿನ ಪ್ರವೇಶವಾಗಿದೆ. ಮಗುವಿಗೆ ಅಶ್ವಿತ್ ಎಂದು ಹೆಸರಿಡಲಾಗಿದೆ. ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮವನ್ನು ಇತ್ತೀಚೆಗೆ ದೊಡ್ಡಡ್ಕದಲ್ಲಿ ನಡೆಸಲಾಯಿತು, ಬಂಧು ಮಿತ್ರರು ಸೇರಿದಂತೆ ಬಂದ ಅಜ್ಜನ ಸನ್ನಿಧಿಗೆ ಬಂದ ಭಕ್ತರಿಗೆಲ್ಲ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
Click