ನ್ಯೂಸ್ ನಾಟೌಟ್ :ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಒಂದು ವಾರಗಳ ಕಾಲ ವಾರ್ಷಿಕ ವಿಶೇಷ ಶಿಬಿರ ನಡೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ನ.06 ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಮರ್ಕಂಜ- ರೆಂಜಾಳದ ಶ್ರೀ. ವಿನಾಯಕ ಸಭಾಭವನದಲ್ಲಿ ನಡೆಯಿತು.
ಶಿಬಿರದ ಮೊದಲ ದಿನದ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಯವರು ನೆರವೇರಿಸಿದರು. ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ದೀಪ ಬೆಳಗಿಸುವುದರೊಂದಿಗೆ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಅಧ್ಯಕ್ಷತೆಯನ್ನು ಡಾ. ಲೀಲಾಧರ ಡಿ ವಿ ಯವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮರ್ಕಂಜ ಇದರ ಅಧ್ಯಕ್ಷೆ ಗೀತಾ ಹೊಸೊಳಿಕೆ, ಪುಟ್ಟಣ್ಣ ಗೌಡ ಬಾಣೂರು ಅಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಜಗನ್ಮೋಹನ್ ರೈ ಹೈದಂಗೂರು ಉಪಾಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ನಿಕಟಪೂರ್ವ ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಚಿನ್ನಪ್ಪ ಗೌಡ ಬೇರಿಕೆ ಅಧ್ಯಕ್ಷರು ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ದಾಮೋದರ ಪಟಾಲಿ ಸಂಚಾಲಕರು ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಶ್ರೀ ಕುಮಾರಸ್ವಾಮಿ ನಿಕಟಪೂರ್ವ ಅಧ್ಯಕ್ಷರು ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ಮಹಾಬಲ ಕಟ್ಟಕೋಡಿ ಸಂಚಾಲಕರು ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಯೋಜನಾಧಿಕಾರಿ ಡಾ. ಪ್ರಮೋದ ಪಿ ಎ, ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಆರ್ಥಿಕ್ ಕೆ ಎಸ್, ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಚೇತನ ಎಂ ಹಾಗೂ ವಿಶ್ವಾಸ್ ಗೌಡ ವೇದಿಕೆಯಲ್ಲಿ ಆಸೀನರಾಗಿದ್ದರು.
ಶಿಬಿರಾರ್ಥಿಗಳಾದ ಮೀನಾಕ್ಷಿ ಮತ್ತು ಕಾವ್ಯ ಪ್ರಾರ್ಥಿಸಿ, ಮೇಘನಾ ಸ್ವಾಗತಿಸಿ, ಅಮೂಲ್ಯಶ್ರೀ ವಂದಿಸಿದರು. ಚಿಂತನ ಹಾಗೂ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರವು 06-11-2024 ಆರಂಭಗೊಂಡು 12-11-2024ರ ತನಕ ನಡೆಯಲಿದೆ. ಈ ಶಿಬಿರದಲ್ಲಿ ಗ್ರಾಮದ ವಿವಿಧ ಶಾಲೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಆರೋಗ್ಯ ಸಮೀಕ್ಷೆಯನ್ನು ಕೂಡ ನಡೆಸಲಾಗುವುದು ಎಂದು ತಿಳಿಸಲಾಗಿದೆ.