- +91 73497 60202
- [email protected]
- November 18, 2024 10:14 PM
ನ್ಯೂಸ್ ನಾಟೌಟ್: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿವೃತ್ತ ನೌಕರರೊಬ್ಬರು 14 ಲಕ್ಷ ರೂ. ಕಳೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಸಿಂದಗಿ ಪಟ್ಟಣದ ಬಸವರಾಜ್ ಹವಾಲ್ದಾರ್ ಎಂಬವರ ಖಾತೆಯಿಂದ ಸೈಬರ್ ಖದೀಮರು 14 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಬಸವರಾಜ ಹವಾಲ್ದಾರ್ ಮತ್ತು ಅವರ ಪತ್ನಿಯ ಜಂಟಿ ಖಾತೆಯಲ್ಲಿದ್ದ 14 ಲಕ್ಷ ರೂ. ವಂಚಕರು ದೋಚಿದ್ದಾರೆ ಎನ್ನಲಾಗಿದೆ. ಇವರ ಮೊಬೈಲ್ ನಲ್ಲಿದ್ದ ಆನ್ ಲೈನ್ ಬ್ಯಾಂಕಿಗ್ ಗೆ ‘ಬೆನಿಫೀಷರ್ ಆ್ಯಡ್’ ಮಾಡಿ ಅದರ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಯಾವಾಗ ಖಾತೆಯಲ್ಲಿದ್ದ ಲಕ್ಷ ಲಕ್ಷ ಹಣ ಮಾಯವಾಯ್ತೋ, ಬಸವರಾಜ ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ, ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಪೊಲೀಸರು, ಬಸವರಾಜ ಅವರ ಮೊಬೈಲ್ ಪರಿಶೀಲಿಸಿದಾಗ ಎಪಿಕೆ ಪೈಲ್ ಮೂಲಕ ಆ್ಯಪ್ ಡೌನ್ ಲೋಡ್ ಮಾಡಿದ್ದನ್ನು ಕಂಡಿದ್ದಾರೆ. ನಂತರ, ತಜ್ಞರಿಂದ ಪರಿಶೀಲನೆ ನಡೆಸಿದಾಗ, ಎಪಿಕೆಯಿಂದ ಡೌನ್ ಲೋಡ್ ಮಾಡಿಕೊಂಡ ಆ್ಯಪ್ ನಿಂದಲೇ ಹಣ ದೋಚಲಾಗಿದೆ ಎಂಬುವುದು ಕಂಡುಬಂದಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಎಪಿಕೆ ಫೈಲ್ ಮೂಲಕ ಹ್ಯಾಕರ್ ಗಳು ಆ್ಯಪ್ ಗಳನ್ನು ಕಳುಹಿಸುತ್ತಾರೆ. ಎಪಿಕೆ ಪೈಲ್ ಓಪನ್ ಮಾಡಿ ಅದರಲ್ಲಿರುವ ಆ್ಯಪ್ ಡೌನ್ ಲೋಡ್ ಮಾಡಿದರೆ ಮೊಬೈಲ್ ಗೆ ಲಿಂಕ್ ಆದ ಎಲ್ಲಾ ಹಣಕಾಸಿನ ವಿವರ ಪಡೆದು ಹಣ ದೋಚುತ್ತಾರೆ.ಹಾಗೆಯೇ, ಬಸವರಾಜ್ ಮನೆಯಲ್ಲಿ, ಮೊಮ್ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಟ್ಟಾಗ ಎಪಿಕೆ ಪೈಲ್ ನಲ್ಲಿರುವ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ. ಬಸವರಾಜ ಹವಾಲ್ದಾರ್ ಅವರ ಮೊಬೈಲ್ ನಿಯಂತ್ರಣ ಸೈಬರ್ ವಂಚಕರ ವಶವಾಗಿದೆ. ಇವರ ಅಕೌಂಟ್ನಲ್ಲಿರುವ ಹಣವನ್ನೆಲ್ಲ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ