ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳಿಂದ ಬೀಡಿ, ಗುಟ್ಕಾ ಬೇಕು ಎಂದು ಪ್ರತಿಭಟನೆ..! 70 ಕ್ಕೂ ಹೆಚ್ಚು ಕೈದಿಗಳಿಂದ ಮುಷ್ಕರ..!

ನ್ಯೂಸ್ ನಾಟೌಟ್ : ಬೀಡಿ, ಗುಟ್ಕಾ ಬೇಕು ಎಂದು ಕಲಬುರಗಿ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.70 ಕ್ಕೂ ಹೆಚ್ಚು ಕೈದಿಗಳು ಪ್ರತಿಭಟಿಸಿದ್ದಾರೆ. ಜೈಲಿನಲ್ಲಿ ಏಕಾಏಕಿ ಎಲ್ಲವೂ ಬಂದ್ ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ನಟ ದರ್ಶನ್‌ ಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದಲ್ಲಿರುವ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅಂದಿನಿಂದ ಪಾಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ವಸ್ತುಗಳನ್ನು ಜೈಲಿನಲ್ಲಿ ಮಾರಾಟ ಮಾಡದಂತೆ ಕ್ರಮವಹಿಸಲಾಗಿದೆ. ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕಿ ವಿರುದ್ಧ ಲಂಚದ ಆರೋಪ ಮಾಡಿ ಕೈದಿ ಆಕೆಗೆ ಬ್ಲ್ಯಾಕ್‌ ಮೇಲ್ ಮಾಡಿದ ಘಟನೆಯೂ ಬೆಳಕಿಗೆ ಬಂದಿದೆ. ಅನಾಮಧೇಯ ಮಹಿಳೆಯಿಂದ ದೂರು ಕೊಡಿಸಿ ಜೈಲು ಅಧೀಕ್ಷಕಿಗೆ ಬ್ಲ್ಯಾಕ್‌ ಮೇಲ್ ಮಾಡಲಾಗಿದೆ. ಕೈದಿಗಳ ಬ್ಲ್ಯಾಕ್‌ ಮೇಲ್ ಕುರಿತು ಅಧೀಕ್ಷಕಿ ಅನಿತಾ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. Click