- +91 73497 60202
- [email protected]
- November 6, 2024 7:56 PM
BJP ಮುಖಂಡನ ಕೊಲೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅರೆಸ್ಟ್ ..! ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಸ್ ನಾಟೌಟ್: ಪಶ್ಚಿಮಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಬಿಜೆಪಿ(BJP) ಮುಖಂಡ ಬಿಜೋಯಿ ಕೃಷ್ಣ ಭುನಿಯಾ ಹತ್ಯೆ ಪ್ರಕರಣದಲ್ಲಿ, ಪ್ರಮುಖ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್(TMC) ಮುಖಂಡ ನಬಕುಮಾರ್ ಮೊಂಡಾಲ್ ಅವರನ್ನು ರಾಷ್ಟ್ರೀಯ ತನಿಖಾ ದಳ (NIA) ಬುಧವಾರ (ನ.06) ಬಂಧಿಸಿದೆ. ಮಿಡ್ನಾಪುರ ಜಿಲ್ಲೆಯ ಗೋರಾಮಹಲ್ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಮೊದಲು ವೈದ್ಯಕೀಯ ತಪಾಸಣೆ ಒಳಪಡಿಸಲಾಯಿತು. ಬಳಿಕ ಕಲ್ಕತ್ತಾ ವಿಶೇಷ ನ್ಯಾಯಾಲಕ್ಕೆ ಹಾಜರುಪಡಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.ಈ ವರ್ಷದ ಎಪ್ರಿಲ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಜೇ ಸೇನ್ ಗುಪ್ತಾ ಅವರ ಏಕಸದಸ್ಯ ಪೀಠವು ಭುನಿಯಾ ಹತ್ಯೆಗೆ ಎನ್‌ಐಎ ತನಿಖೆ ನಡೆಸುವಂತೆ ಆದೇಶಿಸಿತ್ತು. ಕಳೆದ ವರ್ಷ (2023) ಮೇ ತಿಂಗಳಲ್ಲಿ ಮುಖಂಡ ಭುನಿಯಾ ಹತ್ಯೆ ಮಾಡಲಾಗಿತ್ತು. ಈ ಕೃತ್ಯ ಪಶ್ಚಿಮ ಬಂಗಾಳದ್ಯಂತ ರಾಜಕೀಯ ಮುಖಂಡರಲ್ಲಿ ಸಂಚಲನ ಸೃಷ್ಠಿಸಿತ್ತು. ಆರಂಭದಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರ ಏಕಸದಸ್ಯ ಪೀಠವು ಈ ವಿಷಯದಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಮಟ್ಟದ ತನಿಖೆಗೆ ಆದೇಶ ನೀಡಿತ್ತು. ತನಿಖೆಯನ್ನು ಸರಿಯಾಗಿ ಮಾಡಿಲ್ಲ. ದೋಷಾರೋಪ ಪಟ್ಟಿ(ಚಾರ್ಚ್ಶೀಟ್)ನಲ್ಲಿ ಹಲವರ ಹೆಸರು ಕೈ ಬಿಡಲಾಗಿದೆ ಎಂದು ರಾಜ್ಯ ಪೊಲೀಸರ ವಿರುದ್ಧದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್‌ಐಎ ಗೆ ಹಸ್ತಾಂತರಿಸಲಾಯಿತು. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ