ನ್ಯೂಸ್ ನಾಟೌಟ್: ಮೂವರು ಯುವತಿಯರು ಮಂಗಳೂರು ಹೊರ ವಲಯದ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ ನಲ್ಲಿ ಸ್ವಿಮ್ಮಿಂಗ್ ಮಾಡುವಾಗ ಏಕಾಏಕಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೈಸೂರು ಕುರುಬರಹಳ್ಳಿ ನಾಲ್ಕ ನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ , ಕೆ.ಆರ್ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತ ದುರ್ವೈವಿಗಳು ಎಂದು ಗುರುತಿಸಲಾಗಿದೆ.
ಮೈಸೂರು ಮೂಲದ ಯುವತಿಯರು ನ. 16)ಬೆಳಗ್ಗೆ ಬೀಚ್ ಸಮೀಪದ ರೆಸಾರ್ಟ್ ಗೆ ಆಗಮಿಸಿದ್ದರು. ಬಳಿಕ ಕೊಠಡಿ ಪಡೆದಿದ್ದರು. ಇಂದು ಬೆಳಗ್ಗೆ 8.30ರ ಸುಮಾರಿಗೆ ಈಜುಕೊಳದಲ್ಲಿ ಆಟವಾಡುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈಜುಕೊಳದ ಒಂದು ಬದಿಯಲ್ಲಿ ಆರು ಅಡಿಯಷ್ಟು ಆಳವಿತ್ತು. ಮೂವರು ಒಬ್ಬರು ತಪ್ಪಿ ಈ ಬದಿಗೆ ಬಂದು ಮುಳಿಗಿರಬಹುದು, ಆಕೆಯನ್ನು ರಕ್ಷಿಸುವುದಕ್ಕೆ ಬಂದಾಗ ಇನ್ನಿಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಇದೀಗ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.