ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಹತ್ಯೆ ಆರೋಪಿಗೆ ಇಂದು (ನ.26) ಕರ್ನಾಟಕ ರಾಜ್ಯ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ ಎಂದು ವಿಶ್ವಾಸನೀಯ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.
ಎ2 ಆರೋಪಿ ಹರಿಪ್ರಸಾದ್ ಈ ಹಿಂದೆ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿದ್ದ, ಈಗ ಈತನಿಗೆ ಬಿಡುಗಡೆ ದೊರಕಿದೆ ಎಂದು ತಿಳಿದು ಬಂದಿದೆ. 2019 ಮಾರ್ಚ್ 19 ರಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಎ1 ಆರೋಪಿಯಾಗಿದ್ದ ಸಂಪತ್ ಅನ್ನುವಾತ ಹತ್ಯೆಗೊಳಗಾಗಿದ್ದ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಎ2 ಆರೋಪಿ ಹರಿ ಪ್ರಸಾದ್ ಹಾಗೂ ಎ3 ಆರೋಪಿ ಜಯನ್ ಎಂಬುವವರು ಮಡಿಕೇರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅಕ್ಟೋಬರ್ 16ರಂದು ಈ ಪ್ರಕರಣದ ವಿಚಾರಣೆಯನ್ನು 1ನೇ ಅಪರ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶೆ ಪ್ರಶಾಂತಿ ಜಿ. ಕೂಲಂಕುಷವಾಗಿ ವಿಚಾರಣೆ ನಡೆಸಿದರು. ತೀರ್ಪನ್ನು ಅಕ್ಟೋಬರ್ -19ಕ್ಕೆ ಕಾಯ್ದಿರಿಸಿದ್ದರು. ಸೆಕ್ಷನ್ 120B, 302, 201 R/w sec 34 ಐಪಿಸಿ ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡವನ್ನು ವಿಧಿಸಲಾಗಿತ್ತು.