ನ್ಯೂಸ್ ನಾಟೌಟ್ : ಎ.ಆರ್ ರೆಹಮಾನ್ ಅವರ ಸಂಬಂಧ ಮುರಿದು ಬಿದ್ದಿದೆ. ಈ ಬೆನ್ನಲ್ಲೇ ರೆಹಮಾನ್ ಪತ್ನಿ ಪರ ವಕಾಲತ್ತು ವಹಿಸುತ್ತಿರುವ ವಕೀಲೆ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಚಿತ್ರರಂಗದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚುತ್ತಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸೈರಾ ಬಾನು ಪರ ವಕೀಲೆ ವಂದನಾ ಶಾ ಈ ಬಗ್ಗೆ ಮಾತನಾಡಿದ್ದಾರೆ. ಅವರು ಕೆಲವು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.
“‘ಬಾಲಿವುಡ್ ಜೀವನ ಬೇರೆಯದೇ ರೀತಿ ಇದೆ. ದಾಂಪತ್ಯದಲ್ಲಿ ವಿಚ್ಛೇದನಕ್ಕೆ ದ್ರೋಹ ಕಾರಣ ಎಂದು ನಾನು ಭಾವಿಸುವುದಿಲ್ಲ. ಬಾಲಿವುಡ್ ನಟ-ನಟಿಯರು ವಿಭಿನ್ನ ಲೈಂಗಿಕ ಜೀವನವನ್ನು ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಲೈಂಗಿಕ ಜೀವನದಿಂದ ನಿರೀಕ್ಷೆ ಹೆಚ್ಚಿರುತ್ತದೆ. ವ್ಯಭಿಚಾರ ಸಂಭವಿಸುತ್ತದೆ. ಒನ್ ನೈಟ್ ಸ್ಟ್ಯಾಂಡ್ ಗಳು ಅಲ್ಲಿ ಗಂಭೀರ ಎನಿಸಿಕೊಳ್ಳುವುದಿಲ್ಲ. ನಾನು ಬಾಲಿವುಡ್ ನ ಭಾಗವಾಗಿಲ್ಲ. ಆದರೆ ನನ್ನ ಬಳಿ ಬಂದ ಪ್ರಕರಣಗಳನ್ನು ಆಧರಿಸಿ ಹೇಳುತ್ತಿದ್ದೇನೆ” ಎಂದಿದ್ದಾರೆ.
Click