- +91 73497 60202
- [email protected]
- December 3, 2024 10:42 PM
ನ್ಯೂಸ್ ನಾಟೌಟ್ :ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡುಗೆ ಮಹಿಳೆಯೊಬ್ಬರು ಮುತ್ತು ಕೊಡಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರಬಾಬು ನಾಯ್ಡು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಹೂಗುಚ್ಚವನ್ನು ನಾಯ್ಡುಗೆ ನೀಡಿ ಬಳಿಕ ಮುತ್ತು ಕೊಡಲು ಯತ್ನಿಸಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ನಾಯ್ಡುಗೆ ಕಿಸ್ ಮಾಡದಂತೆ ಮಹಿಳೆಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಸುದೀರ್ಘ ಕಾಲ ಸಿಎಂ ಆಗಿರುವ ಚಂದ್ರಬಾಬುಗೆ ಅಭಿಮಾನಿಗಳಿರುವುದು ಸಹಜ. ಚಂದ್ರಬಾಬು ನಾಯ್ಡುಗೆ ಝಡ್ಪ್ಲಸ್ ಭದ್ರತೆಯೂ ಇದೆ. ಅನಕಾಪಲ್ಲಿಯಲ್ಲಿ ಶನಿವಾರ(ನ.2) ನಡೆದ ಘಟನೆ ಎಂದು ತಿಳಿದುಬಂದಿದೆ. ಪ್ರವಾಸದ ಅಂಗವಾಗಿ ಹಲವು ಟಿಡಿಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಚಂದ್ರಬಾಬು ಅವರನ್ನು ನೋಡಲು ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಮಹಿಳಾ ಅಭಿಮಾನಿಯೊಬ್ಬರು ಬಾಬು ಭೇಟಿಗೆ ಯತ್ನಿಸಿದ್ದಾರೆ. ಚಂದ್ರಬಾಬುವನ್ನು ಭೇಟಿಯಾಗಲು ಸುತ್ತಲಿನ ಸೆಕ್ಯುರಿಟಿಯನ್ನು ತಪ್ಪಿಸಿ ಅವರ ಬಳಿಗೆ ಈ ಮಹಿಳೆ ಬಂದಿದ್ದರು. ಆಕೆ ಮುತ್ತು ಕೊಡಲು ಯತ್ನಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ, ತನ್ನ ನೆಚ್ಚಿನ ನಾಯಕನ ಮೇಲಿನ ಪ್ರೀತಿ ಅಭಿಮಾನ ತೋರುವ ಪ್ರಯತ್ನ ಇದಾಗಿದೆ ಎಂದು ಸಿಎಂ ಅಭಿಮಾನಿಗಳು ತಿಳಿಸಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ