ನ್ಯೂಸ್ ನಾಟೌಟ್: ಯಾವುದೇ ಆಸ್ಪತ್ರೆ ಇರಲಿ ರೋಗಿಗಳ ಹಿತವನ್ನೇ ಮೊದಲು ಕಾಯುವುದನ್ನು ನೋಡಿದ್ದೇವೆ. ಆದರೆ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವ ಹಿತವೇ ಮೇಲಾಗುತ್ತಿದೆ ಅನ್ನುವ ದೂರು ಕೇಳಿ ಬರುತ್ತಿವೆ.
ತುರ್ತು ಪರಿಸ್ಥಿತಿಯಲ್ಲಿ ಒಂದು ಜೀವ ಉಳಿಸಲು ಆಂಬ್ಯುಲೆನ್ಸ್ ವೇಗವಾಗಿ ಬಂದು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲುತ್ತದೆ. ಆದರೆ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಪಘಾತ ಹಾಗೂ ಇನ್ನಿತರ ಕಾರಣಗಳಿಂದ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕರೆದುಕೊಂಡು ಬಂದಾಗ ಆಂಬ್ಯುಲೆನ್ಸ್ ನಿಲ್ಲಬೇಕಾಗಿರುವ ಜಾಗದಲ್ಲಿ ಯಾರದ್ದೂ ಖಾಸಗಿ ಕಾರುಗಳು ನಿಂತಿರುತ್ತದೆ. ಇದರಿಂದ ರೋಗಿಗಳನ್ನು ಅಥವಾ ತುರ್ತು ಚಿಕಿತ್ಸೆಯನ್ನು ಪಡೆಯಬೇಕಾಗಿರುವುವರನ್ನು ಆಂಬ್ಯುಲೆನ್ಸ್ ನಿಂದ ಕೆಳಕ್ಕೆ ಇಳಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಯಾರೂ ಗಮನವಹಿಸುತ್ತಿಲ್ಲವೆಂದು ವ್ಯಕ್ತಿಯೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ ಕಾರು ಇಲ್ಲದಿರುವಾಗಲೂ ‘ಟ್ರಾಫಿಕ್ ಕೋನ್’ ಇಟ್ಟು ಅಲ್ಲಿ ಬೇರೆ ವಾಹನಗಳನ್ನು ಬರದಂತೆಯೂ ತಡೆಯಲಾಗುತ್ತಿದೆ. ಇದೆಲ್ಲದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.