‘ಪ್ರೆಗ್ನೆಂಟ್’ ಆದ ಖುಷಿಯನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ 9 ವರ್ಷದ ಬಾಲಕಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಭಾರತದಲ್ಲಿ18 ವರ್ಷಕ್ಕಿಂತ ಕೆಳಗೆ ಅಂದರೆ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ, ಗರ್ಭದಾರಣೆ ನಿಯಮ ಉಲ್ಲಂಘನೆಯಾಗಿದೆ. ಆದರೆ ಮುಸ್ಲಿಮ್ ರಾಷ್ಟ್ರ ಇರಾಕ್‌ ನಲ್ಲಿ ಹಾಗಿಲ್ಲ. ಇಲ್ಲೊಬ್ಬ ಪುಟ್ಟ ಹೆಣ್ಣುಮಗಳ ವಯಸ್ಸು 9. ಆದರೆ ಆಕೆ ಈಗ ಗರ್ಭಿಣಿಯಾಗಿದ್ದಾಳೆ. ಈ ಖುಷಿಯನ್ನು ಸ್ವತಃ 9 ವರ್ಷದ ಬಾಲಕಿ ಸಂಭ್ರಮಿಸಿದ ಘಟನೆ ನಡೆದಿದೆ. ಪಟಾಕಿ ಸಿಡಿಸಿ, ಅತ್ಯಂತ ಖುಷಿಯಿಂದ ಬಾಲಕಿ ತಾನು ಪ್ರೆಗ್ನೆಂಟ್‌ ಎಂದು ಸಂಭ್ರಮಿಸಿದ್ದಾಳೆ. ಈ ವಿಡಿಯೋ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಘಟಕ ಸೇರಿದಂತೆ ಹಲವರು ಇರಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾಕ್‌ ನಲ್ಲಿ ಹೆಣ್ಣುಮಕ್ಕಳ ಕಾನೂನು ಬದ್ಧ ವಿವಾಹ ವಯಸ್ಸು 9 ಆಗಿದೆ. ಇದು ಗತಗಾಲದಲ್ಲಿ ಮಾಡಿದ ನಿಯಮವಲ್ಲ. 2024ರ ಆಗಸ್ಟ್ ತಿಂಗಳಲ್ಲಿ ರೂಪಿಸಿದ ನಿಯಮ. ಇದಕ್ಕೂ ಮೊದಲು ಇರಾಖ್‌ ನಲ್ಲಿ ಮದುವೆ ವಯಸ್ಸು 18 ಆಗಿತ್ತು. ಆದರೆ ಕಳೆದ ಹಲವು ದಶಕಗಳಿಂದ ಇರಾಕ್‌ ನಲ್ಲಿ ಪ್ರಾಥಮಿಕ ಶಾಲಾ ಮಟ್ಟದಲ್ಲೇ ಹೆಣ್ಣುಮಕ್ಕಳನ್ನು ಮದುವೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದು ಹಲವು ಅಂತರಾಷ್ಟ್ರೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. Click