ನ್ಯೂಸ್ ನಾಟೌಟ್: ಪ್ರಾಕೃತಿಕ ವಿಸ್ಮಯಗಳಿಂದಲೇ ಫೇಮಸ್ ಆಗಿರುವ ಐಸ್ ಲ್ಯಾಂಡ್ ನಲ್ಲಿ ಈಗ ಅದ್ಭುತವಾದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವರ ಸೃಷ್ಟಿ ಪ್ರಕೃತಿಯ ವಿಸ್ಮಯಕ್ಕೆ ಜನ ಬೆರಗಾಗಿದ್ದಾರೆ. ಅಂದಹಾಗೆ ಇದು ಐಸ್ ಲ್ಯಾಂಡ್ ನಲ್ಲಿ ಜ್ವಾಲಾಮುಖಿಯೊಂದು ಉಕ್ಕುತ್ತಿರುವ ಅದ್ಭುತ ದೃಶ್ಯವಾಗಿದ್ದು, ಇದನ್ನು ವಿಮಾನದ ಕಿಟಿಕಿಯೊಂದರ ಮೂಲಕ ವಿಮಾನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ.
ಇದು ಯುರೋಪಿಯನ್ ರಾಷ್ಟ್ರ ಐಸ್ ಲ್ಯಾಂಡ್ ನ ಪ್ರವಾಸಿ ತಾಣವಾದ ಬ್ಲೂ ಲಾಗೂನ್ ನಲ್ಲಿ ನಡೆದ ಪ್ರಾಕೃತಿಕ ವಿಸ್ಮಯವಾಗಿದ್ದು, ಲಾವಾ ಉಕ್ಕಿದ ಕಾರಣದಿಂದ ಅಲ್ಲಿ ಬ್ಲೂ ಲಗೂನ್ ಹಾಗೂ ಗ್ರೀಂಡ್ ವಿಕ್ ಪ್ರದೇಶದಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಈ ಜ್ವಾಲಾಮುಖಿ ಉಕ್ಕುತ್ತಿರುವ ದೃಶ್ಯವೂ ಭೂಮಿಯ ಮಧ್ಯೆ ಬೆಂಕಿ ಕೆಂಡದ ಕರಗಿ ಹೊಳೆ ಹರಿಯುತ್ತಿರುವಂತೆ ಕಾಣುತ್ತಿದೆ.
ಸುಮಾರು ಎಂಟು ಶತಮಾನಗಳ ನಂತರ ಐಸ್ಲ್ಯಾಂಡ್ನಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟಿಸಿದೆ.
Click