ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ಹಲವು ಬಗೆಯ ಗಿನ್ನಿಸ್ ರೆಕಾರ್ಡ್ ಗಳನ್ನು ನೋಡಿರುತ್ತೇವೆ. ಇಲ್ಲೊಬ್ಬರು ಮಹಿಳೆ ವಿಭಿನ್ನ ರೀತಿಯಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. 36 ವರ್ಷದ ಅಮೇರಿಕನ್ ಮಹಿಳೆಯೊಬ್ಬರು ತಮ್ಮ ಎದೆಹಾಲು ದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಅಮೆರಿಕದ ಟೆಕ್ಸಾಸ್ ನ ಅಲಿಸ್ಸಾ ಓಗ್ಲೆಟ್ರೀ ಎಂಬುವವರು ಅತೀ ಹೆಚ್ಚು ಎದೆಹಾಲು ದಾನ ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದ್ದಾರೆ. ಅಲಿಸಾ ಬರೋಬ್ಬರಿ 2,645.58 ಲೀಟರ್ ಎದೆಹಾಲು ದಾನ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಉತ್ತರ ಟೆಕ್ಸಾಸ್ ತಾಯಂದಿರ ಹಾಲು ಬ್ಯಾಂಕ್ ಹೇಳಿದ ಪ್ರಕಾರ, ಒಂದು ಲೀಟರ್ ಎದೆ ಹಾಲು 11 ಶಿಶುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲಿಸ್ಸಾ ಅವರು ನೀಡಿರುವ ಎದೆಹಾಲು 3,50,000 ಕ್ಕೂ ಹೆಚ್ಚು ಮಕ್ಕಳಿಗೆ ಪ್ರಯೋಜನವನ್ನು ನೀಡಿದೆ ಎಂದು ತಿಳಿಸಿದೆ. ಇನ್ನೂ ತಮ್ಮ ಈ ಗಿನ್ನಿಸ್ ರೆಕಾರ್ಡ್ ಕುರಿತು ಸಂತಸ ಹಂಚಿಕೊಂಡಿರುವ ಅಲಿಸ್ಸಾ, ಎದೆಹಾಲು ದಾನ ಮಾಡುವುದು ಹಣಕ್ಕಾಗಿ ಅಲ್ಲ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವೆಬ್ ಸೈಟ್ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಮುಂದೆಯೂ ಕೂಡ ಎದೆ ಹಾಲು ದಾನ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Click