- +91 73497 60202
- [email protected]
- November 22, 2024 8:39 PM
ನ್ಯೂಸ್ ನಾಟೌಟ್: ಗುಜರಾತ್ ನ ಅಮ್ರೇಲಿ ಜಿಲ್ಲೆಯ ಉದ್ಯಮಿಯೊಬ್ಬರ ಕುಟುಂಬವೊಂದು ತಮ್ಮ ಬದುಕಿನಲ್ಲಿ ಅದೃಷ್ಟ ತಂದ ಕಾರಿಗೆ ಹಳೆಯದಾದ ಬಳಿಕ ಅದ್ಧೂರಿ ಸಮಾಧಿ ಕಾರ್ಯಕ್ರಮವನ್ನು ನಡೆಸಿದ್ದಾರೆ. ಈ ಬಗ್ಗೆ ವಿಡಿಯೋ ತಡವಾಗಿ ವೈರಲ್ ಆಗಿದೆ. ಪಾದರಶಿಂಗ ಗ್ರಾಮದಲ್ಲಿ ಗುರುವಾರ(ನ.7) ಸಂಜಯ ಪೋಲಾರ್ ಮತ್ತು ಕುಟುಂಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು ಎನ್ನುವುದೇ ಅಚ್ಚರಿ.12 ವರ್ಷ ಹಳೆಯದಾದ ವ್ಯಾಗನ್ ಆರ್ ಕಾರನ್ನು ಜಮೀನಿನಲ್ಲಿ 15 ಅಡಿ ಆಳದ ಹೊಂಡವನ್ನು ಅಗೆದು ಧಾರ್ಮಿಕ ಕ್ರಿಯೆಗಳನ್ನು ಮಾಡಿದ ಬಳಿಕ ಸಮಾಧಿ ಮಾಡಿರುವುದನ್ನು ಕಾಣಬಹುದಾಗಿದೆ. ಹೂವುಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಹ್ಯಾಚ್ ಬ್ಯಾಕ್ ಅನ್ನು ಅವರ ಮನೆಯಿಂದ ಪೋಲಾರನ ಜಮೀನಿಗೆ ಬಹಳ ಸಂಭ್ರಮದಿಂದ ತೆಗೆದುಕೊಂಡು ಹೋಗಿ, ಇಳಿಜಾರಿನಲ್ಲಿ ಓಡಿಸಿ ಸಮಾಧಿ ಗುಂಡಿಗೆ ಕಾರನ್ನು ಇರಿಸಲಾಯಿತು. ವಾಹನಕ್ಕೆ ಹಸುರು ಬಟ್ಟೆಯನ್ನು ಹೊದಿಸಿ, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಕಾರನ್ನು ಸಮಾಧಿ ಹೊಂಡಕ್ಕೆ ಇಳಿಸಲಾಗಿದೆ.ಜೆಸಿಬಿ ಬಳಸಿ ಮಣ್ಣು ಸುರಿದು ಕಾರನ್ನು ಹೂಳಲಾಗಿದೆ.‘ಸಮಾರಂಭಕ್ಕೆ 4 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ, ಸಮಾಧಿ ಸ್ಥಳದಲ್ಲಿ ಗಿಡವನ್ನು ನೆಡಲಾಗುತ್ತದೆ’ ಎಂದು ಕಾರಿನ ಮಾಲಿಕ ಹೇಳಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ